'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೈರು: ಮಾಧ್ಯಮಗಳ ವಿರುದ್ಧ ನಟಿ ಶ್ರುತಿ ಹಾಸನ್ ಕಿಡಿ
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೈರಾದ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ನಟಿ ಶ್ರುತಿ ಹಾಸನ್ ತಿರುಗಿ ಬಿದಿದ್ದಾರೆ. ಮಾನಸಿಕ ತೊಂದರೆಯಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
Published: 13th January 2023 03:20 PM | Last Updated: 13th January 2023 07:09 PM | A+A A-

ನಟಿ ಶ್ರುತಿ ಹಾಸನ್
ಮುಂಬೈ: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೈರಾದ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ನಟಿ ಶ್ರುತಿ ಹಾಸನ್ ತಿರುಗಿ ಬಿದಿದ್ದಾರೆ. ಮಾನಸಿಕ ತೊಂದರೆಯಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಸಂಬಂಧ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ವೈರಲ್ ಜ್ವರದ ಕಾರಣದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.'
'ಈ ರೀತಿಯ ತಪ್ಪು ಮಾಹಿತಿ ಮತ್ತು ಅತಿಯಾದ ನಾಟಕೀಯತೆ ಅಥವಾ ಚೆಲ್ಲಾಟದಿಂದ ಜನರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಹೆದರುತ್ತಾರೆ . ಏನನ್ನು ಊಹಿಸಿ? ಇದು ಕೆಲಸ ಮಾಡುವುದಿಲ್ಲ. ನಾನು ಯಾವಾಗಲೂ ಮಾನಸಿಕ ಆರೋಗ್ಯದ ಕಡೆ ಗಮನಹರಿಸುತ್ತಿರುತ್ತೇನೆ. ಯಾವಾಗಲೂ ನನ್ನ ಎಲ್ಲಾ ಅಂಶಗಳ ಬಗ್ಗೆ ಕಾಳಜಿಯನ್ನು ಪ್ರೋತ್ಸಾಹಿಸುತ್ತೇನೆ. ನನಗೆ ವೈರಲ್ ಜ್ವರವಿತ್ತು. ಈ ಕಾರಣದಿಂದ ಸಮಾರಂಭದಿಂದ ದೂರು ಉಳಿದಿದ್ದಾಗಿ ಬರೆದುಕೊಂಡಿದ್ದಾರೆ.
Nice try !! And Thankyou I’m recovering well from my viral fever pic.twitter.com/oxTYevcK1D
— shruti haasan (@shrutihaasan) January 12, 2023
'ವಾಲ್ಟೇರ್ ವೀರಯ್ಯ' ತೆಲುಗು ಹಾಗೂ ಹಿಂದಿ ವರ್ಸನ್ ನಲ್ಲಿ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.