64ನೇ ವಯಸ್ಸಿನಲ್ಲಿ ಮೂರನೇ ವಿವಾಹವಾದ್ರಾ ಬಹು ಭಾಷಾ ನಟಿ ಜಯಸುಧಾ: ವಿವಾಹದ ಬಗ್ಗೆ ನಟಿಯ ಸ್ಪಷ್ಟನೆ ಏನು?

ಭಾರತೀಯ ಸಿನಿಮಾರಂಗ ಕಂಡ ಖ್ಯಾತ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರಂತೆ!  ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಜಯಸುಧಾ
ಜಯಸುಧಾ

ಭಾರತೀಯ ಸಿನಿಮಾರಂಗ ಕಂಡ ಖ್ಯಾತ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರಂತೆ!  ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಜಯಸುಧಾ ಕೇವಲ ತೆಲುಗು ಮಾತ್ರವಲ್ಲದೆ, ತಮಿಳು, ಮಲಯಾಳಂ, ಕನ್ನಡ, ಹಿಂದಿ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. 80ರ ದಶಕದಲ್ಲಿ ನಾಯಕಿಯಾಗಿ ತೆರೆಮೇಲೆ ಮಿಂಚಿ, ಸ್ಟಾರ್‌ ನಟರ ಜತೆಗೆ ತೆರೆಹಂಚಿಕೊಂಡಿದ್ದ ಈ ನಟಿ, ಇದೀಗ ಮೂರನೇ ಮದುವೆಯಾಗಿದ್ದಾರೆಂಬ ಮಾತು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ಹಲವು ಚರ್ಚೆಗೂ ಇದು ಕಾರಣವಾಗಿದೆ.

ಹಾಗಾದರೆ ನಟಿ ಜಯಸುಧಾ ಮದುವೆಯಾಗಿದ್ದು ಯಾರನ್ನು? ಅಂದಹಾಗೆ, ಜಯಸುಧಾ ಅವರ ಎರಡನೇ ಪತಿ ನಿತಿನ್‌ ಕಪೂರ್‌ 6 ವರ್ಷದ (2017ರಲ್ಲಿ) ಹಿಂದೆಯೇ ನಿಧನರಾಗಿದ್ದರು. ಇದೀಗ ಇನ್ನೋರ್ವ ಉದ್ಯಮಿ ಜತೆ ಜಯಸುಧಾ ವಿವಾಹವಾಗಿದೆಯಂತೆ. ಹೋದಲೆಲ್ಲ ಅವರೊಂದಿಗೆ ಜಯಸುಧಾ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಿನ ವಾರಿಸು ಸಿನಿಮಾದ ಕಾರ್ಯಕ್ರಮಕ್ಕೂ ಆ ಉದ್ಯಮಿ ಜತೆಗೆ ಜಯಸುಧಾ ಆಗಮಿಸಿ, ವೇದಿಕೆ ಹಂಚಿಕೊಂಡಿದ್ದರು.

ನಿರ್ಮಾಪಕ ವಡ್ಡೆ ರಮೇಶ್‌ ಅವರ ಜತೆಗೆ ಜಯಸುಧಾ ಅವರ ಮೊದಲ ವಿವಾಹವಾಗಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ವಿಚ್ಛೇದನದಲ್ಲಿ ಮುರಿದುಬಿತ್ತು. ಬಳಿಕ 1985ರಲ್ಲಿ ಬಾಲಿವುಡ್‌ ನಟ ಜೀತೇಂದ್ರ ಅವರ ಸಂಬಂಧಿ ನಿತಿನ್‌ ಕಪೂರ್‌ ಅವರನ್ನು ಜಯಸುಧಾ ಎರಡನೇ ಮದುವೆ ಆಗಿದ್ದರು. 2017ರಲ್ಲಿ ನಿತಿನ್‌ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಪತಿ ಇಲ್ಲವಾಗಿ ಆರು ವರ್ಷಗಳ ಬಳಿಕ ಮತ್ತೋರ್ವ ಉದ್ಯಮಿ ಜತೆ 64ನೇ ವಯಸ್ಸಿನಲ್ಲಿ ಮದುವೆ ಆಗಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ತಮಿಳು ಚಿತ್ರೋದ್ಯಮ ದಾಟಿಕೊಂಡು ಬೇರೆ ಬೇರೆ ರಾಜ್ಯಗಳಲ್ಲೂ ಈ ಸುದ್ದಿ ಹರಡುತ್ತಿದ್ದಂತೆಯೇ ಈ ಕುರಿತು ಅವರು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ತಾವು 3ನೇ ಮದುವೆ ಆಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮೊಂದಿಗೆ ಓಡಾಡುತ್ತಿರುವ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅವರು ನಟಿ ಜೀವನ ಚರಿತ್ರೆಯನ್ನು ಶೂಟ್ ಮಾಡಲು ಅಮೆರಿಕಾದಿಂದ ಬಂದಿದ್ದಾರಂತೆ. ಹಾಗಾಗಿ ನಟಿ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಟಾಲಿವುಡ್, ಮಾಲಿವುಡ್ ಗಣ್ಯರನ್ನು ಆಹ್ವಾನಿಸಿ ಅದ್ದೂರಿಯಾಗಿ ಮಗನ ಮದುವೆಯನ್ನು ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com