ಮಾರ್ಚ್ 17ಕ್ಕೆ ಗಣೇಶ್ ಅಭಿನಯದ 'ಬಾನದಾರಿಯಲ್ಲಿ' ತೆರೆಗೆ
ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳ ನಂತರ ಗಣೇಶ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು ಈ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಾನದಾರಿಯಲ್ಲಿ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ.
Published: 16th January 2023 09:40 AM | Last Updated: 16th January 2023 02:16 PM | A+A A-

ಚಿತ್ರದ ಪೋಸ್ಟರ್
ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳ ನಂತರ ಗಣೇಶ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು ಈ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಾನದಾರಿಯಲ್ಲಿ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ.
ಖ್ಯಾತ ಛಾಯಾಗ್ರಾಹಕಿ ಪ್ರೀತಾ ಜಯರಾಮ್ ಬರೆದಿರುವ ರೊಮ್ಯಾಂಟಿಕ್ ಡ್ರಾಮಾ ಮಾರ್ಚ್ 17 ರಂದು ತೆರೆಗೆ ಬರಲಿದೆ. ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಟಿಸಿದ್ದು ಬಾನದಾರಿಯಲ್ಲಿ ಶ್ರೀ ವಾರೆ ಟಾಕೀಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ.
ಇದನ್ನೂ ಓದಿ: 'ಬಾನದಾರಿಯಲ್ಲಿ' ವನ್ಯಜೀವಿ ಛಾಯಾಗ್ರಾಹಕಿಯಾಗಿ ರೀಷ್ಮಾ ನಾಣಯ್ಯ!
ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ನಿರ್ದೇಶಕ ಪ್ರೀತಂ, ಚಿತ್ರವು ಪ್ರೇಮಕಥೆಯಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ಬಣ್ಣಿಸಿದರು. ಬಾನದಾರಿಯಲ್ಲಿ ಗಣೇಶ್ ಅವರು ಕ್ರಿಕೆಟಿಗನಾಗಿ, ರುಕ್ಮಿಣಿ ಸರ್ಫರ್ ಆಗಿ ಮತ್ತು ರೀಷ್ಮಾ ವನ್ಯಜೀವಿ ಛಾಯಾಗ್ರಾಹಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಚಿತ್ರದ ಪೋಸ್ಟರ್ ಗಳು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಅಭಿಲಾಷ್ ಕಲತಿಯವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ದೀಪು ಎಸ್ ಕುಮಾರ್ ಅವರ ಸಂಕಲನವಿದೆ.