ದಳಪತಿ ವಿಜಯ್ 67ನೇ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ?
ಸಾಂಡಲ್‌ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ತಮಿಳಿನ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಂದಿನ 67ನೇ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
Published: 18th January 2023 02:20 PM | Last Updated: 18th January 2023 05:07 PM | A+A A-

ರಕ್ಷಿತ್ ಶೆಟ್ಟಿ ಮತ್ತು ವಿಜಯ್
ಸಾಂಡಲ್‌ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ತಮಿಳಿನ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಂದಿನ 67ನೇ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷದ ಅವರ 'ಚಾರ್ಲಿ 777' ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತು.
ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿ ಸೂಪರ್ ಹಿಟ್ ಪಟ್ಟಿಗೆ ಸೇರಿತು. ಈ ಸಿನಿಮಾ ಹಿಟ್ ಆಗಿದ್ದೇ ತಡ, ಮುಂದಿನ ಪ್ರಾಜೆಕ್ಟ್‌ಗಳ ಮೇಲೆ ಹೆಚ್ಚು ಗಮನಹರಿಸಿರುವ ರಕ್ಷಿತ್, ಹಲವು ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ನಿರ್ದೇಶನದ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ.
ಅಚ್ಚರಿಯ ವಿಚಾರ ಏನೆಂದರೆ, ಕನ್ನಡದ ಜತೆಗೆ ಪರಭಾಷೆಯ ಸಿನಿಮಾ ಆಫರ್‌ಗಳೂ ಅವರನ್ನು ಅರಸಿ ಬರುತ್ತಿವೆ. ತಮಿಳಿನ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಂದಿನ 67ನೇ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಾಲಿವುಡ್ ಅಂಗಳದಲ್ಲಿ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ರಕ್ಷಿತ್ ಶೆಟ್ಟಿ ಜತೆಗೆ ಈಗಾಗಲೇ ಚಿತ್ರತಂಡ ಮಾತುಕತೆ ನಡೆಸಿದೆಯಂತೆ.
ಲೋಕೇಶ್ ಕನಕರಾಜ್ ತಮಿಳಿನ ಸ್ಟಾರ್ ಡೈರೆಕ್ಟರ್. ಈಗಾಗಲೇ 'ಖೈದಿ', 'ಮಾಸ್ಟರ್', 'ವಿಕ್ರಮ್' ಸಿನಿಮಾಗಳ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಇದೇ ನಿರ್ದೇಶಕ ಮತ್ತೆ ವಿಜಯ್ ಜತೆ ಕೈ ಜೋಡಿಸಿದ್ದು, ಬೇರೆ ಬೇರೆ ಇಂಡಸ್ಟ್ರಿಯ ಕಲಾವಿದರೂ ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಿತ್ ಶೆಟ್ಟಿ, ಆ ತರಹದ ಯಾವುದೇ ಪ್ರಾಜೆಕ್ಟ್ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.