ಪಬ್ಲಿಕ್ ಫಿಗರ್ ನಿಜ, ಕಲ್ಲೇಟಿನಿಂದ ರಕ್ತ ಬರುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ: ನಟ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಟಾಂಗ್
ನೀವು ಪಬ್ಲಿಕ್ ಫಿಗರ್ ಆದಾಗ ಅಲ್ಲಿ ಹಾರಗಳು ಇರುತ್ತವೆ, ಮೊಟ್ಟೆಯೂ, ಟೊಮ್ಯಾಟೋ, ಕಲ್ಲು ಕೂಡ ನಿಮ್ಮ ಬರುತ್ತವೆ ಎಂದು ಕಿಚ್ಚ ಸುದೀಪ್ ಅವರು ರಶ್ಮಿಕಾ ಮಂದಣ್ಣಗೆ ಸಿಗುತ್ತಿರುವ ನೆಗೆಟಿವ್ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದರು.
Published: 21st January 2023 01:32 PM | Last Updated: 27th January 2023 04:14 PM | A+A A-

ರಶ್ಮಿಕಾ ಮಂದಣ್ಣ ಮತ್ತು ಸುದೀಪ್
ಬೆಂಗಳೂರು: ನೀವು ಪಬ್ಲಿಕ್ ಫಿಗರ್ ಆದಾಗ ಅಲ್ಲಿ ಹಾರಗಳು ಇರುತ್ತವೆ, ಮೊಟ್ಟೆಯೂ, ಟೊಮ್ಯಾಟೋ, ಕಲ್ಲು ಕೂಡ ನಿಮ್ಮ ಬರುತ್ತವೆ" ಎಂದು ಕಿಚ್ಚ ಸುದೀಪ್ ಅವರು ರಶ್ಮಿಕಾ ಮಂದಣ್ಣಗೆ ಸಿಗುತ್ತಿರುವ ನೆಗೆಟಿವ್ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದರು. ಟ್ರೋಲ್, ನೆಗೆಟಿವ್ ಕಾಮೆಂಟ್ಸ್‌ಗಳನ್ನೇ ಹೆಚ್ಚು ಪಡೆಯುತ್ತಿರುವ ರಶ್ಮಿಕಾ ಮಂದಣ್ಣ ಅವರು ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಮಾಧ್ಯಮವನ್ನು ಹ್ಯಾಂಡಲ್ ಮಾಡೋಕೆ ಬರೋದಿಲ್ಲ, ಚಿತ್ರರಂಗದಲ್ಲಿ ಹೇಗಿರಬೇಕು ಎಂದು ಗೊತ್ತಿಲ್ಲ. ಈಗ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಬೇಕು ಎಂದುಕೊಂಡಿದ್ದೇನೆ. ನನಗೆ ದಶಕಗಳ ಕಾಲ ಕಾಂಟ್ರವರ್ಸಿ ಕ್ವೀನ್ ಅಂತ ಅವಾರ್ಡ್ ಕೊಡಬಹುದು, ಅಷ್ಟು ಕಾಂಟ್ರವರ್ಸಿ ನನ್ನ ಬಳಿ ಸುಳಿಯುತ್ತಲೇ ಇರುತ್ತದೆ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಿಲಿಯನ್ ಫಾಲೋವರ್ಸ್ ಬೇಕು ಎಂದ ಮೇಲೆ ಹಾರದ ಜೊತೆ, ಟೊಮೊಟೋ, ಮೊಟ್ಟೆಯೂ ಬರುತ್ತೆ: ರಶ್ಮಿಕಾ ವಿಷಯಕ್ಕೆ ಸುದೀಪ್ ಕಿಡಿ
ನನ್ನ ಫೇವರಿಟ್ ನಟರೊಬ್ಬರ ಸಂದರ್ಶನವನ್ನು ನೋಡಿದೆ. ಅದರಲ್ಲಿ ಅವರು ನೀವು ಪಬ್ಲಿಕ್ ಫಿಗರ್ ಆದಾಗ ಅಲ್ಲಿ ಹಾರಗಳು ಇರುತ್ತವೆ, ಮೊಟ್ಟೆಯೂ, ಟೊಮ್ಯಾಟೋ, ಕಲ್ಲು ಕೂಡ ನಿಮ್ಮ ಬರುತ್ತವೆ ಎಂದು ಹೇಳಿದ್ದರು. ಅದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ ಕಲ್ಲೇಟಿನಿಂದ ರಕ್ತ ಬರುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಜನರು ಏನು ಬೇಕೋ ಅದನ್ನೆಲ್ಲ ಮಾತನಾಡುತ್ತಾರೆ. ಆದರೆ ಅದು ನಮ್ಮ ಕುಟುಂಬಕ್ಕೆ ತೊಂದರೆ ಕೊಡಬಾರದು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.