ಕಿಶೋರ್ ನಟನೆಯ ಪೆಂಟಗನ್ ಗೆ ಸಂಕಷ್ಟ: ವೇದಿಕೆ ಮೇಲೆ ಕಿಡಿಕಾರಿದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ!
ನಟ ಕಿಶೋರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ವೇಳೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ವೇದಿಕೆ ಮೇಲೆ ಚಿತ್ರದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 21st January 2023 04:31 PM | Last Updated: 21st January 2023 04:31 PM | A+A A-

ಕಿಶೋರ್-ರೂಪೇಶ್ ರಾಜಣ್ಣ
ನಟ ಕಿಶೋರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ವೇಳೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ವೇದಿಕೆ ಮೇಲೆ ಚಿತ್ರದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಕಾರ್ಯಕರ್ತರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪದಲ್ಲಿ ಪೆಂಟಗನ್ ಚಿತ್ರ ಸಿಲುಕಿದೆ. ಟೀಸರ್ ನಲ್ಲಿ ನಟ ಪೃಥ್ವಿ ಅಂಬರ್ ರೋಲ್ ಕಾಲ್ ಪದ ಬಳಿಸಿದ್ದು ಈ ಪದವನ್ನು ಬಳಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೂಪೇಶ್ ರಾಜಣ್ಣ ಅವರು ರೋಲ್ ಕಾಲ್ ಪದವನ್ನು ಬಳಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೇದಿಕೆಯ ಮೇಲೆಯೇ ಆ ಪದವನ್ನು ತೆಗೆದುಹಾಕುವಂತೆ ನಿರ್ಮಾಪಕ ಗುರು ದೇಶಪಾಂಡೆ ಅವರನ್ನು ರೂಪೇಶ್ ರಾಜಣ್ಣ ಕೇಳಿದರು. ಮತ್ತೊಬ್ಬ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ 'ರೋಲ್ ಕಾಲ್' ಎಂಬ ಪದಕ್ಕೆ ನಿರಾಸೆಯನ್ನು ಹಂಚಿಕೊಂಡಿದ್ದರು.
ಇದಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಅವರು ಟೀಸರ್ ನೋಡಿ ಏನನ್ನು ಮಾತನಾಡಬೇಡಿ. ಸಂಪೂರ್ಣ ಚಿತ್ರವನ್ನು ನೋಡಿ ಎಂದು ಇಬ್ಬರ ಮನವೊಲಿಸುವ ಪ್ರಯತ್ನ ಮಾಡಿದರು. ಇನ್ನು ಟೀಸರ್ ಬಿಡುಗಡೆಯ ನಂತರ ರೋಲ್ ಕಾಲ್ ಪದವನ್ನು ತೆಗೆದುಹಾಕದಿದ್ದರೆ ಗುರು ದೇಶಪಾಂಡೆ ಅವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಕಾರ್ಯಕರ್ತರ ಗುಂಪು ಇದೀಗ ವಿಡಿಯೋ ಬಿಡುಗಡೆ ಮಾಡಿದೆ.
ಟೀಸರ್‌ನಲ್ಲಿ ಕಿಶೋರ್ ಭೂಗತ ಪಾತಕಿಯಾಗಿದ್ದು ನಂತರ ಕನ್ನಡ ಪರ ಸಂಘಟನೆಯ ಮುಖ್ಯಸ್ಥ, ಕದಂಬ ರಾಮಚಂದ್ರಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿಶೋರ್‌ನ ದುಷ್ಕೃತ್ಯಗಳನ್ನು ಬಯಲಿಗೆಳೆಯುವ ಹುಡುಗನ ಪಾತ್ರದಲ್ಲಿ ಪೃಥ್ವಿ ಅಂಬರ ನಟಿಸುತ್ತಿದ್ದಾರೆ. ಚಿತ್ರ ಐದು ಕಥೆಗಳ ಸುತ್ತ ನಡೆಯುತ್ತದೆ. ಹೀಗಾಗಿ ಐವರು ನಿರ್ದೇಶಕರಾದ ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ರಘು ಶಿವಮೊಗ್ಗ, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ.