ಸಾಕಷ್ಟು ಗ್ಯಾಪ್ ನಂತರ ತೆರೆ ಮೇಲೆ ಮಿಂಚಲು 'ರೈಡರ್'ʼ ರೆಡಿ: ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ
ಸ್ಯಾಂಡಲ್‌ವುಡ್ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಫ್ಯಾನ್ಸ್‌ಗೆ ಬರ್ತ್ ಡೇ ಗಿಫ್ಟ್ ನೀಡಿರುವ ನಿಖಿಲ್ ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
Published: 23rd January 2023 09:26 AM | Last Updated: 23rd January 2023 01:57 PM | A+A A-

ನಿಖಿಲ್ ಕುಮಾರಸ್ವಾಮಿ
ಸ್ಯಾಂಡಲ್‌ವುಡ್ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಫ್ಯಾನ್ಸ್‌ಗೆ ಬರ್ತ್ ಡೇ ಗಿಫ್ಟ್ ನೀಡಿರುವ ನಿಖಿಲ್ ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಸಾಕಷ್ಟು ಗ್ಯಾಪ್‌ನ ನಂತರ ತೆರೆ ಮೇಲೆ ಮಿಂಚಲು 'ರೈಡರ್' ರೆಡಿಯಾಗಿದ್ದಾರೆ. ಲಾಂಗ್ ಗ್ಯಾಪ್‌ನ ನಂತರ ನಿಖಿಲ್ ಕುಮಾರಸ್ವಾಮಿ ತೆರೆ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ. ಸಿನಿಮಾ, ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಯುವರಾಜ ಇದೀಗ ತಮ್ಮ ಮುಂಬರುವ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ. ʼಟಗರುʼ ಮತ್ತು ʼಸಲಗʼದಂತಹ ಹಿಟ್ ಸಿನಿಮಾ ನೀಡಿರುವ ಕೆ. ಪಿ. ಶ್ರೀಕಾಂತ್ ಮತ್ತು ಲಹರಿ ಸಂಸ್ಥೆಯ ಜಿ. ಮನೋಹರನ್ ಅವರು ನಿಖಿಲ್ ನಟನೆಯ ಈ ಹೊಸ ಸಿನಿಮಾವ ನಿರ್ಮಾಣ ಮಾಡಲಿದ್ದಾರೆ.
ಇನ್ನು ಹೆಸರಿಡದ ಸಿನಿಮಾಗೆ ಹೊಸ ಪ್ರತಿಭೆ ಮನೋಹರ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನೋಡಿದ್ರೆ, ಇದೊಂದು ಪಕ್ಕಾ ಸ್ಪೋರ್ಟ್ಸ್ ಕಥಾಹಂದರ ಹೊಂದಿರುವ ಸಿನಿಮಾ ಅಂತ ಅನಿಸುತ್ತದೆ. ಜಸ್ಟ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ? ಎಂಬ ಅಪ್ ಡೇಟ್ ಹೊರಬಿದ್ದಿಲ್ಲ.
ಇವರು ಈ ಹಿಂದೆ ‘ದನ ಕಾಯೋನು’, ‘ಜೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಮನೋ ಹರ, ಹೆಸರಿಡದ ಯೋಜನೆಯು ಕ್ರೀಡಾ ಆಧಾರಿತ ನಾಟಕವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಖಿಲ್ ಕುಮಾರ್‌ಗೆ ಅನೌನ್ಸ್ ಮಾಡಿರುವ ಸಿನಿಮಾದ ಕಥೆ ರಾ ಕಂಟೆಂಟ್ ಹೊಂದಿದೆ. ಅವರ ಹಿಂದಿನ ಸಿನಿಮಾಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸದ್ಯಕ್ಕೆ ಅನೌನ್ಸ್ ಆಗಲಿ ಎಂದು ಈ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಇದೊಂದು ಬೇರೆ ರೀತಿಯ ಕಥೆ ಎಂದಿದ್ದಾರೆ.
ಇದನ್ನೂ ಓದಿ: ಮಗನಿಗೆ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ; ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ
ತಮ್ಮಂತಹ ಚೊಚ್ಚಲ ನಿರ್ದೇಶಕರಿಗೆ ಈ ಚಿತ್ರ ದೊಡ್ಡ ಬ್ರೇಕ್ ಎಂದು ಹಂಚಿಕೊಂಡಿದ್ದಾರೆ. ಸಿನಿಮಾಗಳ ವಿಷಯಕ್ಕೆ ಬಂದರೆ ಕೆಪಿ ಶ್ರೀಕಾಂತ್ ನನ್ನ ಗುರು. ನಾನು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ ಮತ್ತು ನಾನು ಯಾವುದೇ ಚಲನಚಿತ್ರ ಹಿನ್ನೆಲೆಯಿಂದ ಬಂದವನಲ್ಲದ ಕಾರಣ, ನನಗೆ ಚಿತ್ರರಂಗದಲ್ಲಿ ಯಾರನ್ನೂ ಹೇಗೆ ಸಂಪರ್ಕಿಸಬೇಕು ಎಂದು ತಿಳಿದಿರಲಿಲ್ಲ. ನಾನು ಶ್ರೀಕಾಂತ್ ಅವರನ್ನು ಸಾಮಾನ್ಯ ಸ್ನೇಹಿತನ ಮೂಲಕ ಪರಿಚಯ ಮಾಡಿಕೊಂಡೆ ಮತ್ತು ಅಲ್ಲಿಂದ ಇಲ್ಲಿಯವರೆಗೆ, ಕಳೆದ 8 ವರ್ಷಗಳಿಂದ ನನಗೆ ದೊಡ್ಡ ಬೆಂಬಲ ಸಿಕ್ಕಿದೆ.
ಸ್ಕ್ರಿಪ್ಟ್ ತಯಾರಿಸಲು ಸುಮಾರು ಒಂದು ವರ್ಷ ತೆಗೆದುಕೊಂಡಿತು, ನಾವು ಅಪ್ ಕಮಿಂಗ್ ಸೂಪರ್‌ಸ್ಟಾರ್‌ಗಾಗಿ ಹುಡುಕುತ್ತಿದ್ದೆವು, ನಿಖಿಲ್ ಈ ಪಾತ್ರಕ್ಕೆ ಫಿಟ್ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದರು.ಈ ಚಿತ್ರವನ್ನು ಕೆ ಪಿ ಶ್ರೀಕಾಂತ್ ಮತ್ತು ಮನೋಹರನ್ ನಿರ್ಮಾಣ ಮಾಡುತ್ತಿದ್ದು, ಒಳ್ಳೆಯ ಪ್ರೊಡಕ್ಷನ್ ಹೌಸ್ ಮೂಲಕ ನಾನು ನಿರ್ದೇಶಕನಾಗುತ್ತಿದ್ದೇನೆ ಎಂದು ಹೇಳಿರುವ ನಿರ್ದೇಶಕ ಮನೋ ಹರ, ‘ಈ ಕಥೆಯ ಮೇಲೆ ಸಾಕಷ್ಟು ದಿನಗಳ ಕಾಲ ಕೆಲಸ ಮಾಡಿದ ನಂತರ ನಟ ನಿಖಿಲ್ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿದೆವು. ಸದ್ಯಕ್ಕೆ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ತಂತ್ರಜ್ಞರು ಇನ್ನೂ ಫೈನಲ್ ಆಗಿಲ್ಲ. ಅದಕ್ಕೆ ಇನ್ನಷ್ಟು ಸಮಯವಿದ್ದು, ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಎಲ್ಲವನ್ನೂ ಹೇಳಲಿದೆ’ ಎಂದಿದ್ದಾರೆ.