ಕಾಂತಾರ-2 ಕಥೆ ಆರಂಭಿಸಿದ ನಿರ್ದೇಶಕ ರಿಶಬ್ ಶೆಟ್ಟಿ: ಹಿಂದಿಯಲ್ಲಿ ಶತ ದಿನ ಪೂರೈಸಿದ 'ಕಾಂತಾರ'
ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು ಕಾಂತಾರ ಸಿನಿಮಾ. ಇದೀಗ ಎಲ್ಲೆಡೆ 'ಕಾಂತಾರ 2' ಸಿನಿಮಾ ಬಗ್ಗೆಯೇ ಮಾತು.
Published: 23rd January 2023 09:57 AM | Last Updated: 23rd January 2023 01:58 PM | A+A A-

ಕಾಂತಾರ ಸಿನಿಮಾ ಸ್ಟಿಲ್
ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು ಕಾಂತಾರ ಸಿನಿಮಾ. ಇದೀಗ ಎಲ್ಲೆಡೆ 'ಕಾಂತಾರ 2' ಸಿನಿಮಾ ಬಗ್ಗೆಯೇ ಮಾತು.
'ಕಾಂತಾರ 2' ಯಾವಾಗ ಬರಲಿದೆ? ಯಾವ ರೀತಿಯ ಕಥೆ ಇರಲಿದೆ ಎಂಬ ಚರ್ಚೆಯೂ ಜೋರಾಗಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 'ಕಾಂತಾರ 2' ಸಿನಿಮಾಗೆ ಸ್ಕ್ರಿಪ್ಟ್ ಬರೆಯುವ ಕೆಲಸ ಶುರುವಾಗಿದೆಯಂತೆ. ಇದು 'ಕಾಂತಾರ' ಸೀಕ್ವೆಲ್ ಅಥವಾ ಪ್ರೀಕ್ವೆಲ್ ಆಗಿರಲಿದ್ಯಾ ಎಂಬುದು ಕಥೆ ಬರೆದ ಮೇಲೆ ತಿಳಿಯಲಿದೆ.
ಈಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, 'ರಿಷಬ್ ಶೆಟ್ಟಿ ಅವರು ಈಗಾಗಲೇ ಕಾಂತಾರ 2ಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ತಮ್ಮ ಬರಹಗಾರರ ಟೀಮ್ ಜೊತೆಗೆ ಕರ್ನಾಟಕದ ಕರಾವಳಿ ಭಾಗದ ಕಾಡಿನಲ್ಲಿ ಸಂಶೋಧನೆ ಮಾಡುತ್ತಿದ್ದು, ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
'ಕಾಂತಾರ 2' ಸಿನಿಮಾದ ಕೆಲ ಭಾಗದ ಚಿತ್ರೀಕರಣವನ್ನು ಮಳೆಗಾಲದಲ್ಲಿ ಮಾಡಬೇಕಿದೆ. ಅದಕ್ಕಾಗಿ ಜೂನ್ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದೇವೆ..' ಎಂದು ಮಾಹಿತಿ ನೀಡಿದ್ದರು.
ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ತಂಡ ಇತ್ತೀಚೆಗೆ ನಡೆದ ಭೂತಕೋಲ ಉತ್ಸವದಲ್ಲಿ ದೇವರ ಕೋಲದ ಆಶೀರ್ವಾದವನ್ನು ಕೋರಿದ್ದಾರೆ. ಆಕ್ಷನ್ ಥ್ರಿಲ್ಲರ್‌ನ ಹಿಂದಿ ಆವೃತ್ತಿಯು ಶತ ದಿನೋತ್ಸವ ಪೂರೈಸಿತು.
ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಮತ್ತು ಅಚ್ಯುತ್ ಕುಮಾರ್ ನಟಿಸಿದ ಕಾಂತಾರ, ಮನುಷ್ಯ-ಪ್ರಕೃತಿ ಸಂಘರ್ಷದ ಕುರಿತ ಸಿನಿಮಾವಾಗಿದೆ, ಅಜನೀಶ್ ಲೋಕನಾಥ್ ಅವರ ಸಂಗೀತದೊಂದಿಗೆ, ಕಾಂತಾರ ಸಿನಿಮಾಗೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ನಿರ್ವಹಿಸಿದರು.