ಅದ್ಭುತ ಪ್ರತಿಭೆಗಳೊಂದಿಗೆ ಚಿತ್ರರಂಗದಲ್ಲಿ ಇನ್ನೂ ಉಳಿದುಕೊಂಡಿದ್ದೇನೆ ಎನ್ನುವುದೇ ನನಗೆ ಸಂತೋಷದ ವಿಷಯ: ಕಿಚ್ಚ ಸುದೀಪ್ ಭಾವುಕ ನುಡಿ!
ಇದು ಖಂಡಿತವಾಗಿಯೂ ಸ್ಮರಣೀಯ ಪ್ರಯಾಣವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಈ 27 ವರ್ಷಗಳಲ್ಲಿ ನಾನು ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದೇನೆ
Published: 31st January 2023 09:46 AM | Last Updated: 31st January 2023 05:13 PM | A+A A-

ಸುದೀಪ್
ಬೆಂಗಳೂರು: ಇಂದಿಗೆ ಸುದೀಪ್ ಚಿತ್ರರಂಗಕ್ಕೆ ಸುದೀಪ್ ಕಾಲಿಟ್ಟು 27 ವರ್ಷಗಳಾಗಿವೆ. 27 ವರ್ಷಗಳ ಹಿಂದೆ ಜನವರಿ 31 ರಂದು ಸುದೀಪ್ ತಮ್ಮ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿ, ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಕಿಚ್ಚ ಸುದೀಪ್ ಅವರ ಜೀವನದಲ್ಲಿ ಜನವರಿ 31 ಬಹಳ ವಿಶೇಷವಾದ ದಿನ.
ಪ್ರತಿ ಬಾರಿಯೂ ನನ್ನ ಜೊತೆಗೆ ನಿಂತಿದ್ದಕ್ಕೆ ನನ್ನ ಗೆಳೆಯರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನೀವೆಲ್ಲ ಆಶೀರ್ವದಿಸಿರುವಿರಿ ಮತ್ತು ತುಂಬಾ ಪ್ರೀತಿ ನಿಮ್ಮಿಂದ ಸಿಕ್ಕಿದೆ. ನನಗೆ ಅವಕಾಶಗಳನ್ನು ನೀಡಿದ್ದಕ್ಕಾಗಿ ಕೆಎಫ್‌ಐಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಭ್ರಾತೃತ್ವಕ್ಕೆ ನಾನು ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗಿರುತ್ತದೆ ಎಂದು ಕಿಚ್ಚ ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದು ಖಂಡಿತವಾಗಿಯೂ ಸ್ಮರಣೀಯ ಪ್ರಯಾಣವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಈ 27 ವರ್ಷಗಳಲ್ಲಿ ನಾನು ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ತಲುಪಿಸಲು ನನಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಆ ಎಲ್ಲ ಅದ್ಭುತ ಪ್ರತಿಭೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
It's surely been a memorable journey. Glad that I have managed to survive these 27 years in the field of Cinema with so many awesome talents all around. Want to thank all those wonderful talents for having inspired me to do better and deliver to the best of my ability.
— Kichcha Sudeepa (@KicchaSudeep) January 30, 2023
L&H pic.twitter.com/GBLTvRjvlx