ನಾನಿ ಅಭಿನಯದ 'ದಸರಾ' ಟೀಸರ್ ಬಿಡುಗಡೆ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ
ಮಾರ್ಚ್ 30 ರಂದು ಬಹು ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ನಾನಿ ಅಭಿನಯದ ದಸರಾವನ್ನು ತೆಲುಗು ಮತ್ತು ಮಲಯಾಳಂನಲ್ಲಿ 'ದಸರಾ' ಎಂದು ಕರೆಯಲಾಗುತ್ತದೆ ಮತ್ತು ಕ್ರಮವಾಗಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ 'ನಾನೀಸ್ ದಸರಾ' ಎಂದು ಶೀರ್ಷಿಕೆಯಿದೆ.
Published: 31st January 2023 11:19 AM | Last Updated: 31st January 2023 11:19 AM | A+A A-

ದಸರಾ ಸಿನಿಮಾದ ಟೀಸರ್‌ನಲ್ಲಿ ನಾನಿ
ನಾನಿ ಅಭಿನಯದ 'ದಸರಾ' ಸಿನಿಮಾದ ಬಹು ನಿರೀಕ್ಷಿತ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಶ್ರೀಕಾಂತ್ ಒಡೆಲಾ ಬರೆದು ನಿರ್ದೇಶಿಸಿರುವ 'ದಸರಾ'ದಲ್ಲಿ ಕೀರ್ತಿ ಸುರೇಶ್ ಮತ್ತು ಸಾಯಿ ಕುಮಾರ್ ಕೂಡ ನಟಿಸಿದ್ದಾರೆ. ಮಲಯಾಳಂ ನಟ ಶೈನ್ ಟಾಮ್ ಚಾಕೊ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
1 ನಿಮಿಷ 15 ಸೆಕೆಂಡ್‌ಗಳಿರುವ ಟೀಸರ್, ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಆಳದಲ್ಲಿರುವ ಹಳ್ಳಿಗಾಡಿನ ವೀರ್ಲಪಲ್ಲಿ ಪ್ರಪಂಚಕ್ಕೆ ಒಂದು ಇಣುಕು ನೋಟ ನೀಡುತ್ತದೆ.
ಕಥಾವಸ್ತುವಿನ ಬಗ್ಗೆ ಸ್ವಲ್ಪ ಬಹಿರಂಗಪಡಿಸುವ ಟೀಸರ್ ಪಟ್ಟಣವಾಸಿಗಳ ಮದ್ಯದ ಒಲವು ಮತ್ತು ಜಗಳದ ಬಗ್ಗೆ ಕೆಲವು ಡೈಲಾಗ್‌ಗಳನ್ನು ಕೇಳಿಸುತ್ತದೆ. ಇದರಲ್ಲಿ ನಾಯಕ ನಟ ನಾನಿ ಸಿಗರೇಟ್ ಹಚ್ಚುವುದು, ಜನರಿಗೆ ಹೊಡೆಯುವುದು ಮತ್ತು ಸೇಡು ತೀರಿಸಿಕೊಳ್ಳಲು ಹವಣಿಸುತ್ತಾ ಹಲ್ಲು ಕಿರಿಯುವುದನ್ನು ಸಹ ಕಾಣಬಹುದಾಗಿದೆ.
ಮಾರ್ಚ್ 30 ರಂದು ಬಹು ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ದಸರಾವನ್ನು ತೆಲುಗು ಮತ್ತು ಮಲಯಾಳಂನಲ್ಲಿ 'ದಸರಾ' ಎಂದು ಕರೆಯಲಾಗುತ್ತದೆ ಮತ್ತು ಕ್ರಮವಾಗಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ 'ನಾನೀಸ್ ದಸರಾ' ಎಂದು ಶೀರ್ಷಿಕೆಯಿದೆ.
ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿರುವ ದಸರಾ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಬರವಣಿಗೆ ತಂಡದಲ್ಲಿ ಜೆಲ್ಲಾ ಶ್ರೀನಾಥ್, ಅರ್ಜುನ ಪಾತೂರಿ ಮತ್ತು ವಂಶಿ ಕೃಷ್ಣ ಪಿ. ಕೆಲಸ ಮಾಡಿದ್ದಾರೆ.
ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸತ್ಯನ್ ಸೂರ್ಯನ್, ಸಂಕಲನಕಾರ ನವೀನ್ ನೂಲಿ ಮತ್ತು ನಿರ್ಮಾಣ ವಿನ್ಯಾಸಕ ಅವಿನಾಶ್ ಕೊಲ್ಲಾ ಇದ್ದಾರೆ.