ಮೋಹನ್ ಲಾಲ್ ನಟನೆಯ 'ಮಲೈಕೋಟ್ಟೈ ವಾಲಿಬನ್' ಮಲಯಾಳಂ ಸಿನಿಮಾಗೆ ನನ್ನನ್ನ ಸಂಪರ್ಕಿಸಿದ್ದು ನಿಜ, ಅದರೆ...: ರಿಷಬ್ ಶೆಟ್ಟಿ!
ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಖ್ಯಾತ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ
Published: 31st January 2023 11:50 AM | Last Updated: 31st January 2023 05:21 PM | A+A A-

ರಿಷಬ್ ಶೆಟ್ಟಿ
ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಖ್ಯಾತ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ಅವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಮಲೈಕೋಟ್ಟೈ ವಾಲಿಬನ್ ತಂಡ ತಮ್ಮನ್ನು ಸಂಪರ್ಕಿಸಿದ್ದು ನಿಜ, ಆದರೆ ಹಲವು ಕಾರಣಗಳಿಗಾಗಿ ತಾವು ಈ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ರಿಷಬ್ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.
ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೇಲ್ ನಲ್ಲಿ ಬ್ಯುಸಿಯಾಗಿದ್ದಾರೆ, 2024ರ ಮದ್ಯದಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದ್ದು ಈ ಸಂಬಂಧ ಕೆಲಸ ನಡೆಯುತ್ತಿವೆ.
ಮಲೈಕೋಟ್ಟೈ ವಾಲಿಬನ್ ಸಿನಿಮಾದ ಅದೇ ಪಾತ್ರಕ್ಕಾಗಿ ಕಮಲ್ ಹಾಸನ್ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಅವರು ಇಂಡಿಯನ್ 2 ರ ಚಿತ್ರೀಕರಣದಲ್ಲಿ ನಿರತರಾಗಿದ್ದರಿಂದ ಅವರು ಸಹ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಂತೆ, ಕಂತೆ- ವದಂತಿಗಳಿಗೆ ನಟ ರಕ್ಷಿತ್ ಶೆಟ್ಟಿ ತೆರೆ!
ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಈ ಚಿತ್ರವು ಸಾಹಸಮಯವಾಗಿದೆ ಎಂದು ಹೇಳಲಾಗುತ್ತದೆ, ಇದರಲ್ಲಿ ಮೋಹನ್ ಲಾಲ್ ಕುಸ್ತಿಪಟು ಪಾತ್ರವನ್ನು ನಿರ್ವಹಿಸಿದ್ದಾರೆ. ಡ್ಯಾನಿಶ್ ಸೇಟ್, ಹರೀಶ್ ಪೆರಾಡಿ ಮತ್ತು ಸೋನಾಲಿ ಕುಲಕರ್ಣಿ ತಾರಾಗಣದಲ್ಲಿದ್ದಾರೆ.
ಮಲೈಕೊಟ್ಟೈ ವಲಿಬನ್ ಚಿತ್ರಕಥೆಯನ್ನು PS ರಫೀಕ್ ಅವರು ಬರೆದಿದ್ದಾರೆ, ಅವರು ಈ ಹಿಂದೆ ನಾಯಕನ್ (2010) ಮತ್ತು ಅಮೆನ್ (2013) ನಲ್ಲಿ ಲಿಜೋ ಅವರೊಂದಿಗೆ ಸಹಕರಿಸಿದ್ದಾರೆ.