'ನಾನು ಮತ್ತು ಗುಂಡಾ 2' ಚಿತ್ರೀಕರಣ ಆರಂಭ: ಚಿತ್ರದಲ್ಲಿ ನಾಯಿ ಪಾತ್ರವೇ ಹೈಲೈಟ್
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಚಲನಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ ಮತ್ತು ನಾಯಿಯೊಂದರ ಕತೆ ಆಧಾರಿತ ಈ ಸಿನಿಮಾ ಸ್ಟಾರ್ ಗಳಿಲ್ಲದೇ ಇದ್ದರೂ ಗೆದ್ದಿತ್ತು.
Published: 05th July 2023 11:27 AM | Last Updated: 05th July 2023 01:24 PM | A+A A-

ನಾನು ಮತ್ತು ಗುಂಡಾ
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಚಲನಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ ಮತ್ತು ನಾಯಿಯೊಂದರ ಕತೆ ಆಧಾರಿತ ಈ ಸಿನಿಮಾ ಸ್ಟಾರ್ ಗಳಿಲ್ಲದೇ ಇದ್ದರೂ ಗೆದ್ದಿತ್ತು.
ನಾಯಕ ಹಾಗೂ ನಾಯಿಯೊಂದರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ಆ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯ ಅದ್ಭುತ ಅಭಿನಯವಿತ್ತು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆಗೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ತಂದಿತ್ತ ಸಿನಿಮಾ ಇದಾಗಿತ್ತು.
ಆ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಈಗ ಅದರ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ -2’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಾಯಿ ಪಾತ್ರವನ್ನೇ ನಿರ್ದೇಶಕರು ಹೈಲೈಟ್ ಮಾಡುತ್ತಿದ್ದು, ಚಿತ್ರದ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ಇದನ್ನೂ ಓದಿ: ಗೆಳೆಯನ ಹುಟ್ಟುಹಬ್ಬ ಜೊತೆಗೆ ಸೆಲಬ್ರೇಟ್: ಮದುವೆ ಸೂಚನೆ ನೀಡಿದ್ರಾ ನಟಿ ಅನುಪಮಾ ಗೌಡ!
ಮೊದಲ ಭಾಗದಲ್ಲಿ ನಾಯಕ ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಹೇಳಲಾಗುತ್ತಿದೆ.
ಸದ್ಯ ಮೈಸೂರಿನ ಸುತ್ತಮುತ್ತಲಿನ ಲೊಕೇಶನ್‌ಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಚಿತ್ರೀಕರಣ ಶೇ.50 ರಷ್ಟು ಮುಕ್ತಾಯಗೊಂಡಿದೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನ, ತನ್ವಿಕ್ ಜಿ. ಅವರ ಛಾಯಾಗ್ರಹಣ, ರೋಹಿತ್ ರಾಮನ್ ಅವರ ಸಂಭಾಷಣೆ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.