ಟೆರರ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ: ಡೆಡ್ಲಿ ಸೋಮ ಆದಿತ್ಯ ಎದುರು ಘರ್ಜಿಸಲು ಸಜ್ಜು!
ಸಿನಿಮಾ ಎಂಬ ಬಣ್ಣದ ಪ್ರಪಂಚದಲ್ಲಿ ಹೀರೋ ಆಗಿ ಮಿಂಚಿದವರು ಖಳ ನಟನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಕೆಲ ನಟರಲ್ಲಿ ಇರುತ್ತದೆ. ಈ ಸಾಲಿಗೆ ಶ್ರೀನಗರ ಕಿಟ್ಟಿ ಕೂಡ ಒಬ್ಬರು. ನಟನಾಗಿ ಸಿನಿಮಾ ಪ್ರೇಕ್ಷಕರ ಮನಸ್ಸು ಕದ್ದಿದ್ದ ಶ್ರೀನಗರ ಕಿಟ್ಟಿ, ಹೀರೋ ಪಾತ್ರಕ್ಕಿಂತ ವಿಲನ್ ಪಾತ್ರ ಹೆಚ್ಚು ಮಾಡ್ತಾ ಇದ್ದಾರೆ. ಅವತಾರ ಪುರುಷ, ಮಾದೇವಾ ಸಿನಿಮಾ ಬಳಿಕ ಟೆರರ್...
Published: 10th July 2023 10:51 AM | Last Updated: 10th July 2023 05:04 PM | A+A A-

ಶ್ರೀನಗರ ಕಿಟ್ಟಿ
ಸಿನಿಮಾ ಎಂಬ ಬಣ್ಣದ ಪ್ರಪಂಚದಲ್ಲಿ ಹೀರೋ ಆಗಿ ಮಿಂಚಿದವರು ಖಳ ನಟನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಕೆಲ ನಟರಲ್ಲಿ ಇರುತ್ತದೆ. ಈ ಸಾಲಿಗೆ ಶ್ರೀನಗರ ಕಿಟ್ಟಿ ಕೂಡ ಒಬ್ಬರು. ನಟನಾಗಿ ಸಿನಿಮಾ ಪ್ರೇಕ್ಷಕರ ಮನಸ್ಸು ಕದ್ದಿದ್ದ ಶ್ರೀನಗರ ಕಿಟ್ಟಿ, ಹೀರೋ ಪಾತ್ರಕ್ಕಿಂತ ವಿಲನ್ ಪಾತ್ರ ಹೆಚ್ಚು ಮಾಡ್ತಾ ಇದ್ದಾರೆ. ಅವತಾರ ಪುರುಷ, ಮಾದೇವಾ ಸಿನಿಮಾ ಬಳಿಕ ಟೆರರ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಲನ್ ಆಗಿ ನಟಿಸುತ್ತಿದ್ದಾರೆ.
ರಂಜನ್ ಶಿವರಾಮಗೌಡ ನಿರ್ದೇಶನದ ಟೆರರ್ ಚಿತ್ರದಲ್ಲಿ ನಟ ಆದಿತ್ಯ ಎದುರು ಘರ್ಜಿಸಲು ಶ್ರೀನಗರ ಕಿಟ್ಟಿ ಸಜ್ಜಾಗಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ಮೂಲಕ ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದ ಚಿತ್ರೀಕರಣವು ಪ್ರಸ್ತುತ 3ನೇ ಹಂತದಲ್ಲಿದೆ.
ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 ಸಿನಿಮಾ ಘೋಷಣೆ: ಶ್ರೀನಗರ ಕಿಟ್ಟಿ ಜೊತೆಗೆ ರಮ್ಯಾ? ನಿರ್ದೇಶಕ ನಾಗಶೇಖರ್ ಹೇಳಿದ್ದೇನು?
ಮಾಫಿಯಾ ಕುರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಆದಿತ್ಯಾ ಗ್ಯಾಂಗಸ್ಟರ್ ಆಗಿ ಕಾಣಿಸಿಕೊಂಡರೆ, ಆದಿತ್ಯ ಎದುರಾಳಿಯಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಮುಂದಿನ ಚಿತ್ರೀಕರಣಕ್ಕಾಗಿ ಅದಿತ್ಯ ಅವರು, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಚಿತ್ರದಲ್ಲಿ ಶರತ್ ಲೋಹಿತಾಶ್ವ, ಮಿಮಿಕ್ರಿ ದಯಾನಂದ್ ಮತ್ತು ಧರ್ಮ ಮುನಿ ನಟಿಸಿದ್ದಾರೆ. ಯುಪಿಪಿಐ ಎಂಟರ್‌ಟೈನರ್ಸ್ ಅಡಿಯಲ್ಲಿ ಸಿಲ್ಕ್ ಮಂಜು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಹರ್ಷವರ್ಧನ್ ರಾಜ್ ಅವರ ಸಂಗೀತ ಮತ್ತು ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.