ಒಟಿಟಿಯಲ್ಲಿ 'ಪೊನ್ನಿಯನ್ ಸೆಲ್ವನ್–2' ಬಿಡುಗಡೆ; ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಪ್ರೈಮ್ ವಿಡಿಯೋ ಗುರುವಾರ ಟ್ವಿಟರ್‌ನಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎಂದು ಘೋಷಿಸಿದೆ. ಚಲನಚಿತ್ರವು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಲು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.
Published: 02nd June 2023 11:37 AM | Last Updated: 02nd June 2023 07:38 PM | A+A A-

ಪೊನ್ನಿಯಿನ್ ಸೆಲ್ವನ್ 2 ಚಿತ್ರದ ದೃಶ್ಯ
ಪ್ರೈಮ್ ವಿಡಿಯೋ ಗುರುವಾರ ಟ್ವಿಟರ್‌ನಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎಂದು ಘೋಷಿಸಿದೆ. ಚಲನಚಿತ್ರವು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಲು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. ಚಿತ್ರವು ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಪೊನ್ನಿಯಿನ್ ಸೆಲ್ವನ್‌ನ ಮೊದಲ ಭಾಗವು 2022ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಯಿತು. ಐತಿಹಾಸಿಕ ಕಾಲ್ಪನಿಕ ಚಲನಚಿತ್ರವು ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಡೆಯುವಂತದ್ದು. ಚಿತ್ರದಲ್ಲಿ ವಿಕ್ರಮ್, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ ಮತ್ತು ಜಯಂ ರವಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೊತೆಗೆ ಪ್ರಭು, ಶರತ್‌ಕುಮಾರ್, ಪ್ರಕಾಶ್ ರಾಜ್, ಜಯರಾಮ್, ಐಶ್ವರ್ಯಾ ಲಕ್ಷ್ಮಿ ಮುಂತಾದವರಿದ್ದಾರೆ.
step into the world of grandeur and intrigue as this epic saga continues! #PS2onPrime, watch now
Available in Tamil, Telugu, Kannada and Malayalamhttps://t.co/6lYhjbXDZJ pic.twitter.com/DTUFwPQRky— prime video IN (@PrimeVideoIN) June 1, 2023
ಪೊನ್ನಿಯಿನ್ ಸೆಲ್ವನ್‌ಗೆ ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬೆಂಬಲ ನೀಡಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ಮಣಿರತ್ನಂ ಅವರು ಎಲಂಗೋ ಕುಮಾರವೇಲ್ ಮತ್ತು ಬಿ ಜಯಮೋಹನ್ ಅವರೊಂದಿಗೆ ನಿರ್ಮಿಸಿದ್ದಾರೆ. ಈ ಚಲನಚಿತ್ರವು ಬಿಡುಗಡೆಯಾದ ನಂತರ ₹ 342 ಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ ಮತ್ತು 2023ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಲನಚಿತ್ರವಾಗಿದೆ. ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ 4ನೇ ತಮಿಳು ಚಲನಚಿತ್ರವಾಗಿದೆ.