ಜೂನ್ 8 ರಂದು ವಿನಯ್ ರಾಜಕುಮಾರ್ ನಟನೆಯ 'ಗ್ರಾಮಾಯಣ'ಕ್ಕೆ ಮತ್ತೆ ಚಾಲನೆ!

ಗ್ರಾಮಾಯಣ ಸಿನಿಮಾವನ್ನು ದೇವನೂರು ಚಂದ್ರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ, ಚಿತ್ರಕಥೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ.
ವಿನಯ್  ರಾಜಕುಮಾರ್
ವಿನಯ್ ರಾಜಕುಮಾರ್

ದೇವನೂರು ಚಂದ್ರು ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿವ ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ನಟಿಸುತ್ತಿದ್ದಾರೆ. ಸಿನಿಮಾವನ್ನು 2018 ರಲ್ಲಿ ಘೋಷಿಸಲಾಯಿತು.  ಸಿನಿಮಾ ಚಿತ್ರೀಕರಣ ದೇವನೂರಿನಲ್ಲಿ ನಡೆಯುತ್ತಿತ್ತು ಮತ್ತು ತಯಾರಕರು 25 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದರು ಆದರೆ, ದುರದೃಷ್ಟವಶಾತ್, ಅನಿರೀಕ್ಷಿತ ಸಂದರ್ಭಗಳಿಂದ ಅದು ಮಧ್ಯದಲ್ಲಿ ಸ್ಥಗಿತಗೊಂಡಿತು.

ಹಲವು ಕಾರಣಗಳಿಂದ ನಿಂತು ಹೋಗಿದ್ದ ಇದನ್ನು ಈಗ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಅವರು ಲಹರಿ ಫಿಲ್ಮ್ಸ್ ಮನೋಹರ್‌ ನಾಯ್ಡು ಜತೆಗೆ ಸೇರಿ ಆರಂಭಿಸುತ್ತಿದ್ದಾರೆ. ‘ಯುಐ’ ಸಿನಿಮಾದ ನಂತರ ಶ್ರೀಕಾಂತ್‌ ಮತ್ತು ಮನೋಹರ್‌ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಗ್ರಾಮಾಯಣ ಸಿನಿಮಾವನ್ನು ದೇವನೂರು ಚಂದ್ರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ, ಚಿತ್ರಕಥೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ ಅವರಿಗೆ ಇದು ಮೊದಲ ಪ್ರಯತ್ನ. ಈ ಸಿನಿಮಾ ಆರಂಭದಲ್ಲೇ ವಿನಯ್‌ ರಾಜ್‌ಕುಮಾರ್‌ ಲುಕ್‌ ಮತ್ತು ಫಸ್ಟ್‌ ಲುಕ್‌ ಟೀಸರ್‌ ಮೂಲಕ ನಿರೀಕ್ಷೆ ಮೂಡಿಸಿತ್ತು. ಈ ಕಾರಣದಿಂದಲೇ ಶ್ರೀಕಾಂತ್‌ ಮತ್ತು ಮನೋಹರ್‌ ನಾಯ್ಡು ಸೇರಿ ಈ ಚಿತ್ರಕ್ಕೆ ಕೈ ಹಾಕಿದ್ದಾರಂತೆ.

ಗ್ರಾಮಾಯಣ ಹೆಸರೇ ಹೇಳುವಂತೆ ಹಳ್ಳಿ ಬ್ಯಾಕ್‌ಗ್ರೌಂಡ್‌ನಲ್ಲಿ ನಡೆಯುವ ಕಥೆ. ನಮ್ಮ ನೆಲದ ಕಥೆಯನ್ನು ನಾನು ಇದರಲ್ಲಿ ಹೇಳುತ್ತಿದ್ದೇನೆ. ಒಂದು ಹಳ್ಳಿಯಲ್ಲಿಏನೇನು ನಡೆಯುತ್ತದೆ, ಅಲ್ಲಿನ ವಾತಾವರಣ, ಜನಜೀವನವನ್ನು ಈ ಸಿನಿಮಾ ಮೂಲಕ ತೆರೆದಿಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಯುವಕ ಪಾತ್ರದಲ್ಲಿ ವಿನಯ್ ನಟಿಸಲಿದ್ದಾರೆ, ಸಿಕ್ಸ್ತ್ ಸೆನ್ಸ್ ಸೀನ ಎಂಬ ಪಾತ್ರ ಅವರದ್ದಾಗಿದೆ.

ಆರಂಭದಲ್ಲಿ, ನಿರ್ಮಾಪಕರು ಅಮೃತಾ ಅಯ್ಯಂಗಾರ್ ನಾಯಕಿ ಎಂದು ಘೋಷಿಸಿದ್ದರು.  ಹಿರಿಯ ನಟ ಮತ್ತು ಅವರ ರಿಯಾಲಿಟಿ ಶೋ ಮಜಾ ಟಾಕೀಸ್‌ ನಲ್ಲಿ ಜನಪ್ರಿಯರಾದ ಅಪರ್ಣಾ ಅವರು 30 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾರೆ ಎಂದು ಹೇಳಲಾಗಿತ್ತು.ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮತ್ತು ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಕೂಡ ಈ ಯೋಜನೆಯಲ್ಲಿ ಭಾಗವಹಿಸಿದ್ದರು.

ಆದರೆ ಮತ್ತೆ ಕೆಲವು ಬದಲಾವಣೆಗಳೊಂದಿಗೆ ಗ್ರಾಮಾಯಣ ಚಿತ್ರ ತಂಡ ಬರುವ ಸಾಧ್ಯತೆಯಿದೆ. ವಿನಯ್  ಅವರ ಪಾತ್ರ ಖಚಿತ ಪಡಿಸಿರುವ ಚಿತ್ರ ತಂಡ , ಉಳಿದ ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಉಳಿಸಿಕೊಳ್ಳುತ್ತಾರೆಯೇ ಎಂದು ನೋಡಬೇಕಾಗಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಶೀಘ್ರವೇ ಬಿಡುಗಡೆ ಮಾಡು ಸಾಧ್ಯತೆಯಿದೆ.

ಗ್ರಾಮಾಯಣದ ಹೊರತಾಗಿ, ವಿನಯ್ ಅವರು ಶ್ರೀಲೇಶ್ ನಾಯರ್ ನಿರ್ದೇಶನದ ಪೆಪೆ ಮತ್ತು ಕೀರ್ತಿ ಅವರ ನಿರ್ದೇಶನದ ಅಂದೊಂದಿತ್ತು ಕಾಲ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ, ಇವೆರಡೂ ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com