'ಪುಷ್ಪ: ದಿ ರೂಲ್' ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮ ಮುಂಬರುವ ಪ್ಯಾನ್-ಇಂಡಿಯಾ ಚಿತ್ರ 'ಪುಷ್ಪ: ದಿ ರೂಲ್' ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಿದ್ದಾರೆ. ಈ ಕುರಿತು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಸೆಟ್‌ಗಳಿಂದ ತೆಗೆದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
Published: 28th June 2023 04:44 PM | Last Updated: 28th June 2023 07:44 PM | A+A A-

ರಶ್ಮಿಕಾ ಮಂದಣ್ಣ
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮ ಮುಂಬರುವ ಪ್ಯಾನ್-ಇಂಡಿಯಾ ಚಿತ್ರ 'ಪುಷ್ಪ: ದಿ ರೂಲ್' ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಿದ್ದಾರೆ. ಈ ಕುರಿತು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಸೆಟ್‌ಗಳಿಂದ ತೆಗೆದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ಬ್ಲಾಕ್‌ಬಸ್ಟರ್ ಚಿತ್ರದ ಸೀಕ್ವೆಲ್‌ನಲ್ಲಿ ಅವರು ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸಲಿದ್ದಾರೆ.
'ಪುಷ್ಪ: ದಿ ರೈಸ್' ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದರು. ಇದು ಡಿಸೆಂಬರ್ 17, 2021 ರಂದು ದೇಶದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ನಟ ಫಹಾದ್ ಫಾಸಿಲ್ ಚಿತ್ರದ ಭಾಗವಾಗಿದ್ದರು.
'ಪುಷ್ಪ: ದಿ ರೈಸ್' ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತು. ಏಕೆಂದರೆ, ಚಿತ್ರದ ಕುರಿತು ಸಂಭಾಷಣೆಗಳಿಂದ ಹಾಡುಗಳವರೆಗೆ ಎಲ್ಲವೂ ಟ್ರೆಂಡ್ ಸೆಟ್ ಮಾಡಿತ್ತು. ‘ಪುಷ್ಪ’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿತ್ತು. ಪವರ್ ಪ್ಯಾಕ್ಡ್ ಪರ್ಫಾರ್ಮೆನ್ಸ್ ನೀಡಿದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ನಾವು ನಿರೀಕ್ಷಿಸಿದ್ದಕ್ಕಿಂತ ಬೇಗ ಸಿನಿಮಾದ ಎರಡನೇ ಕಂತಿನೊಂದಿಗೆ ಮರಳುತ್ತಿದ್ದಾರೆ.
'ಪುಷ್ಪ 2 ದಿ ರೂಲ್' ಗ್ಲೋಬಲ್ ಇಂಡಿಯನ್ ಚಿತ್ರದ ಅರ್ಥವನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿದೆ. ಈ ಹಿಂದೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ, 'ಪುಷ್ಪ 2' ಚಿತ್ರತಂಡ ನಟನ ಕುತೂಹಲಕಾರಿ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿತ್ತು.
ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಚಿನ್ನದ ಆಭರಣಗಳು ಮತ್ತು ನಿಂಬೆಹಣ್ಣಿನ ಹಾರವನ್ನು ಧರಿಸಿದ್ದರು. ಇದಲ್ಲದೆ, ನಟನ ಕೈಯಲ್ಲಿ ಗನ್ ಹಿಡಿದಿರುವುದನ್ನು ಕಾಣಬಹುದು.
ಇದನ್ನೂ ಓದಿ: ರಷ್ಯಾದಲ್ಲೂ 'ಪುಷ್ಪ: ದಿ ರೈಸ್' ಮೋಡಿ: ಬಾಕ್ಸ್ ಆಫೀಸ್‌ನಲ್ಲಿ 13 ಕೋಟಿ ರೂ. ಸಂಗ್ರಹಿಸಿ ದಾಖಲೆ
'ಪುಷ್ಪ: ದಿ ರೂಲ್' ಬಿಡುಗಡೆಗೆ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.
ಈಮಧ್ಯೆ, ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಮುಂದಿನ ಚಿತ್ರ 'ಅನಿಮಲ್' ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ 'ಅನಿಮಲ್'ನಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಚಿತ್ರ ಆಗಸ್ಟ್ 11 ರಂದು ಥಿಯೇಟರ್‌ಗಳಿಗೆ ಬರಲಿದೆ.
ಇದಲ್ಲದೆ, ರಶ್ಮಿಕಾ ಅವರು 'ರೈನ್‌ಬೋ' ಮತ್ತು 'ವಿಎನ್‌ಆರ್ ಟ್ರಿಯೊ' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.