
ಪ್ರಣಯಂ ಚಿತ್ರದ ಸ್ಟಿಲ್
ಬಿಚ್ಚುಗತ್ತಿ ಚಾಪ್ಟರ್ 1 ಖ್ಯಾತಿಯ ರಾಜವರ್ದನ್ ನಟಿಸಿರುವ ಹಾಗೂ ದತ್ತಾತ್ರೇಯ ನಿರ್ದೇಶನದ ಪ್ರಣಯಂ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈಗ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನೈನಾ ಗಂಗೂಲಿ ಅವರ ಚೊಚ್ಚಲ ಕನ್ನಡ ಚಿತ್ರ ಪ್ರಣಯಂ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.
ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ನವಜೋಡಿಗಳ ನಡುವಿನ ಪ್ರೀತಿ ಪ್ರೇಮದ ಕಥೆಯಿದಾಗಿದ್ದು, ಯುವ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜವರ್ದನ್ ಅವರು, ರೊಮ್ಯಾಂಟಿಕ್ ಸಬ್ಜೆಕ್ಟ್‌ಗಾಗಿ ಹುಡುಕುತ್ತಿರುವಾಗ ಈ ಪ್ರಣಯಂ ಸಿಕ್ಕಿತು. ಇದುವರೆಗೂ ಆಕ್ಷನ್ ಚಿತ್ರಗಳನ್ನೇ ಮಾಡುತ್ತಿದ್ದೆ. ಈ ಚಿತ್ರದಲ್ಲಿ ಒಬ್ಬ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.
ಇದನ್ನು ಓದಿ: ನಾನು ವಿಫಲವಾಗಿದ್ದ ಸ್ಥಳದಲ್ಲೇ ನನ್ನನ್ನು ಸಾಬೀತುಪಡಿಸಲು ಹೊರಟಿದ್ದೇನೆ: ನಟ ರಾಜವರ್ದನ್
ಹಿರಿಯ ಸಂಗೀತ ಸಂಯೋಜಕ ಮನೋಮೂರ್ತಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ನಾಗೇಶ್ ಆಚಾರ್ಯ ಛಾಯಾಗ್ರಹಣ ಮಾಡುತ್ತಿದ್ದಾರೆ. ಪರಮೇಶ್ ಈ ಚಿತ್ರದ ನಿರ್ಮಾಪಕರಾಗಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಡಬ್ ಮಾಡಲು ನೋಡುತ್ತಿದ್ದಾರೆ.