ಅರ್ಜುನ್ ರೆಡ್ಡಿ ನಿರ್ದೇಶಕರ ಜೊತೆ ಪ್ಯಾನ್ ಇಂಡಿಯಾ ಸಿನಿಮಾಗೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಸಜ್ಜು!
ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಶುಕ್ರವಾರ ಸೌತ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಘೋಷಿಸಿದರು.
Published: 04th March 2023 02:11 PM | Last Updated: 04th March 2023 03:05 PM | A+A A-

ಅಲ್ಲು ಅರ್ಜುನ್
ಮುಂಬೈ: ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಶುಕ್ರವಾರ ಸೌತ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಘೋಷಿಸಿದರು.
ಭೂಷಣ್ ಕುಮಾರ್ ಪರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸಿನಿಮಾ ಮಾಡಲು ಚಿತ್ರತಂಡ ಇತ್ತೀಚೆಗೆ 'ಪುಷ್ಪ' ಸಿನಿಮಾ ತಾರೆಯನ್ನು ಭೇಟಿ ಮಾಡಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರವು ಪ್ರಭಾಸ್ ಅಭಿನಯದ ಸಂದೀಪ್ ರೆಡ್ಡಿ ವಂಗ ಅವರ 'ಸ್ಪಿರಿಟ್' ಸಿನಿಮಾ ನಂತರ ಚಿತ್ರೀಕರಣವನ್ನು ಪ್ರಾರಂಭಿಸಲಿದೆ.
ಮುಂಬರುವ ಚಿತ್ರವು 2019 ರ ಬ್ಲಾಕ್‌ಬಸ್ಟರ್ ಹಿಟ್ ಶಾಹಿದ್ ಕಪೂರ್ ನಟಿಸಿದ್ದ 'ಕಬೀರ್ ಸಿಂಗ್' ನಂತರ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ನಡುವಿನ ನಾಲ್ಕನೇ ಸಹಯೋಗವಾಗಲಿದೆ. ಸಂದೀಪ್ ರೆಡ್ಡಿ ರಣಬೀರ್ ಕಪೂರ್ ನಟಿಸಿರುವ 'ಅನಿಮಲ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ಚಿತ್ರದ ಶೀರ್ಷಿಕೆ, ಕಥಾವಸ್ತು ಮತ್ತು ಪಾತ್ರವರ್ಗ ಸೇರಿದಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಸಂದೀಪ್ ರೆಡ್ಡಿ ವಂಗಾ ಮತ್ತು ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಮತ್ತು ಸಹ-ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶಿವ ಚನಾನ ಅವರು ಸ್ಥಾಪಿಸಿದ ಟಿ-ಸೀರೀಸ್ ಫಿಲ್ಮ್ಸ್ ಪ್ರೊಡಕ್ಷನ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಲಿದೆ.