ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಪೋಸ್ಟರ್ ಹಾಗೂ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್ ಹಾಡೋಂದು ಬಿಡುಗಡೆಯಾಗಿದ್ದು, ಧನಂಜಯ್-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Published: 09th March 2023 01:46 PM | Last Updated: 09th March 2023 01:57 PM | A+A A-

ಚಿತ್ರದ ಸ್ಟಿಲ್.
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಪೋಸ್ಟರ್ ಹಾಗೂ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್ ಹಾಡೋಂದು ಬಿಡುಗಡೆಯಾಗಿದ್ದು, ಧನಂಜಯ್-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಚಿತ್ರದ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದ್ದು, ಪತಿ-ಪತ್ನಿ ನಡುವಿನ ಪ್ರೀತಿಯನ್ನು ಈ ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ತೋರಿಸಲಾಗಿದೆ.
ಬಡವ ರಾಸ್ಕಲ್ ನಲ್ಲಿ ಉಡುಪಿ ಹೋಟೆಲ್ ಹಾಡಿನಿಂದ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಜೋಡಿ ಇದೀಗ “ಅರೇ ಇದು ಎಂಥಾ ಭಾವನೆ” ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ಮಾಸ್ ಟೈಟಲ್ ಟ್ರಾಕ್ ಬಿಡುಗಡೆ
ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹರಿಚರಣ್, ಈ ಹಾಡಿಗೆ ದನಿಯಾಗಿದ್ದಾರೆ.
ಮಾರ್ಚ್ 30ರಂದು 'ಹೊಯ್ಸಳ' ಸಿನಿಮಾ ಬಿಡುಗಡೆ ಆಗಲಿದೆ. ಇದು ಧನಂಜಯ್ ವೃತ್ತಿ ಜೀವನದ 25ನೇ ಸಿನಿಮಾ ಎನ್ನುವುದು ವಿಶೇಷವಾಗಿದೆ.
ವಿಜಯ್ ಎನ್ ನಿರ್ದೇಶನದ ಈ ಮಾಸ್ ಎಂಟರ್‌ಟೈನರ್‌ನಲ್ಲಿ ಧನಂಜಯ್ ಅವರು ಖಡಕ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್, ಮತ್ತು ರಘು ಶಿವಮೊಗ್ಗ ಸೇರಿದಂತೆ ಇತರ ನಟರ ತಂಡವನ್ನು ಹೊಂದಿದೆ.