ಅಮೆರಿಕಾದಲ್ಲಿ ಕಾಂತಾರ ಪ್ರದರ್ಶನ: ವಿಶ್ವಸಂಸ್ಥೆ ವಾರ್ಷಿಕ ಸಭೆಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಭಾಷಣ!

ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಜಿನೀವಾದಲ್ಲಿ ಮಾರ್ಚ್ 17 ರಂದು ಹಾಲ್ ಸಂಖ್ಯೆ 13 ನಲ್ಲಿರುವ ಪಾಥೆ ಬಾಲೆಕ್ಸರ್ಟ್‌ನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಅಮೆರಿಕಾದಲ್ಲಿ ರಿಷಬ್ ಶೆಟ್ಟಿ
ಅಮೆರಿಕಾದಲ್ಲಿ ರಿಷಬ್ ಶೆಟ್ಟಿ

ಜಗತ್ತಿನಾದ್ಯಂತ ಗಮನ ಸೆಳೆಯುತ್ತಿರುವ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಇದು ನಿಜಕ್ಕೂ ಉತ್ತಮ ಸಮಯ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಆಸ್ಕರ್ ವಿಜಯದ ಸಂಭ್ರಮಾಚರಣೆ ಕಡಿಮೆಯಾಗುವ ಮೊದಲು,  ರಿಷಬ್ ಶೆಟ್ಟಿ  ಕಾಂತಾರ ಕಡಲಾಚೆಯಲ್ಲಿ ಸುದ್ದಿ ಮಾಡುತ್ತಿದೆ.

ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಜಿನೀವಾದಲ್ಲಿ ಮಾರ್ಚ್ 17 ರಂದು ಹಾಲ್ ಸಂಖ್ಯೆ 13 ನಲ್ಲಿರುವ ಪಾಥೆ ಬಾಲೆಕ್ಸರ್ಟ್‌ನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.

ಬರಹಗಾರ, ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಈಗಾಗಲೇ ಜಿನೀವಾ ತಲುಪಿದ್ದು, ಮೌಖಿಕ ಸಲ್ಲಿಕೆ ಪೂರ್ಣಗೊಳಿಸಿದ್ದಾರೆ. ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೋಲೀಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ರಿಷಬ್ ಶೆಟ್ಟಿ ಅವರು ಜೆನೆರಾದಲ್ಲಿ ಯುಎನ್‌ಎಚ್‌ಆರ್‌ಸಿ ಅಧಿವೇಶನದಲ್ಲಿ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಭಾರತೀಯ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ ಎಂದು ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್‌ಗುಪ್ತ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳು ಭಾಗಿ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ರು ಕೂಡ ಭಾಗಿ ಆಗುತ್ತಿದ್ದಾರೆ. ಸಿನಿಮಾ ಮೂಲಕ ಪರಿಸರ ಮತ್ತು ಅರಣ್ಯದಂಚಿನಲ್ಲಿರೋ ಜನರ ಸಮಸ್ಯೆಗಳನ್ನೂ ರಿಷಬ್ ತೋರಿದ್ದಾರೆ. ಅದೇ ವಿಷಯವನ್ನ ರಿಷಬ್ ಇಲ್ಲೂ ಮಾತನಾಡಲಿದ್ದಾರೆ  ಎಂದು ತಿಳಿದು ಬಂದಿದೆ.

ಸ್ಕ್ರೀನಿಂಗ್ ನಂತರ, ರಿಷಬ್ ಕನ್ನಡದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಂತರ ಯುಎನ್ ಗಣ್ಯರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಈ ಸಭೆಯಲ್ಲಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಳಸುವುದು ವಾಡಿಕೆ. ಆದರೆ, ರಿಷಬ್ ಈ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ. ಈಗಾಗಲೇ ಈ ಸಭೆಯಲ್ಲಿ ಸದ್ಯ ಜಗತ್ತು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ರಿಷಬ್ ಯಾವೆಲ್ಲ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ, ಮನುಷ್ಯ-ಪ್ರಕೃತಿ ಸಂಘರ್ಷಗಳನ್ನು ಒಳಗೊಂಡಿದೆ ಮತ್ತು ಜಾನಪದ ಮೂಲ ಕಥೆಯಾಗಿದೆ. ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com