'RC15' ಶೂಟಿಂಗ್ ಸೆಟ್ ನಲ್ಲಿ ಪ್ರಭುದೇವ ತಂಡದಿಂದ 'ನಾಟು ನಾಟು' ಡ್ಯಾನ್ಸ್ ನೊಂದಿಗೆ ರಾಮ್ ಚರಣ್ ಗೆ ಅದ್ದೂರಿ ಸ್ವಾಗತ! ವಿಡಿಯೋ
ನಾಟು ನಾಟು ಜ್ವರ ಇನ್ನೂ ಮುಗಿದಿಲ್ಲ! ನಟ ರಾಮ್ ಚರಣ್ ಅವರ ಮುಂಬರುವ RC15 ಶೂಟಿಂಗ್ ಸೆಟ್ ನಲ್ಲಿ ಅವರಿಗೆ ನೃತ್ಯ ನಿರ್ದೇಶಕ-ನಿರ್ದೇಶಕ ಪ್ರಭುದೇವ ಮತ್ತು ಅವರ ತಂಡದಿಂದ 'ನಾಟು ನಾಟು' ಡ್ಯಾನ್ಸ್ ನೊಂದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.
Published: 19th March 2023 04:55 PM | Last Updated: 19th March 2023 05:28 PM | A+A A-

ಪ್ರಭುದೇವ ತಂಡದಿಂದ ನಾಟು ನಾಟು ಡ್ಯಾನ್ಸ್
ಹೈದ್ರಾಬಾದ್: ನಾಟು ನಾಟು ಜ್ವರ ಇನ್ನೂ ಮುಗಿದಿಲ್ಲ! ನಟ ರಾಮ್ ಚರಣ್ ಅವರ ಮುಂಬರುವ RC15 ಶೂಟಿಂಗ್ ಸೆಟ್ ನಲ್ಲಿ ಅವರಿಗೆ ನೃತ್ಯ ನಿರ್ದೇಶಕ-ನಿರ್ದೇಶಕ ಪ್ರಭುದೇವ ಮತ್ತು ಅವರ ತಂಡದಿಂದ 'ನಾಟು ನಾಟು' ಡ್ಯಾನ್ಸ್ ನೊಂದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.
ಈ ವಿಡಿಯೋವನ್ನು ರಾಮ್ ಚರಣ್ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. ಇದೇ ವೇಳೆ ಮಾರಿಗೋಲ್ಡ್‌ನಿಂದ ಮಾಡಿದ ಬೃಹತ್ ಮಾಲೆಯನ್ನು ಸಹ ಅವರಿಗೆ ಹಾಕಲಾಗಿದೆ. 'ಇಂತಹ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗಲ್ಲ. ಸ್ವೀಟ್ ಸರ್ ಪೈಸ್ ಗೆ ನಮ್ಮ ಗ್ರ್ಯಾಂಡ್ ಮಾಸ್ಟರ್ ಪ್ರಭುದೇವ ಸರ್ ಗೆ ಧನ್ಯವಾದಗಳು. RC15 ಶೂಟಿಂಗ್ ಗೆ ಮರಳಲು ಸಂತೋಷವಾಗಿದೆ ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಚಿರಂಜೀವಿ, ಪುತ್ರ ರಾಮ್ ಚರಣ್
Can’t thank you all enough for such a warm welcome.
— Ram Charan (@AlwaysRamCharan) March 19, 2023
Our Grand master @PDdancing sir thank you for the sweet surprise
Feels great to be back at shoot#RC15 https://t.co/7jBbas4Jgy
ಈ ವಿಡಿಯೋ ಫೋಸ್ಟ್ ಮಾಡುತ್ತಿದ್ದಂತೆಯೇ ತೆಲುಗು ಚಿತ್ರೋದ್ಯಮದ ಸದಸ್ಯರು ಹಾಗೂ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸ್ವೀಟೆಸ್ಟ್ ವೆಲ್ ಕಮ್" ಎಂದು ರಾಮ್ ಚರಣ್ ಪತ್ನಿ ಉಪಾಸನಾ ಬರೆದುಕೊಂಡಿದ್ದಾರೆ. ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.