
ಪೆಂಟಗನ್ ಸಿನಿಮಾ ಸ್ಟಿಲ್
ಕನ್ನಡದ ಪ್ರಯೋಗಾತ್ಮಕ ಹಾಗೂ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಪೆಂಟಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಐದು ನಿರ್ದೇಶಕರ ಐದು ಕತೆಯುಳ್ಳ ಸಿನಿಮಾ ಏಪ್ರಿಲ್ 7 ರಂದು ದೇಶಾದ್ಯಂತ ರಿಲೀಸ್ ಆಗಲಿದೆ ಎಂದು ಡೈರೆಕ್ಟರ್ ಗುರು ದೇಶಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.
ಪೆಂಟಗನ್ ಸಿನಮಾಗೆ ಅಭಿಲಾಷ್ ಕಲಾತಿ ಮತ್ತು ಗುರುಪ್ರಸಾದ್ ಎಂಜಿ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಪೆಂಟಗನ್‌ನಲ್ಲಿ ಕಿಶೋರ್, ಪೃಥ್ವಿ ಅಂಬಾರ್, ರವಿಶಂಕರ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: 'ಪೆಂಟಗನ್' ಚಿತ್ರದಲ್ಲಿ ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ನಟ ಕಿಶೋರ್ ನಟನೆ
ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ. ಹಾಗಾಗಿ ಸಿನಿಮಾ ಟ್ರೈಲರ್ ಬಿಡುಗಡೆಯಾದ ದಿನದಿಂದ ನಿರೀಕ್ಷೆ ಮೂಡಿಸಿದೆ.