ಐಪಿಎಲ್ ನಡುವೆಯೂ ರಾಘವೇಂದ್ರ ಸ್ಟೋರ್ಸ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ; ವಿಜಯ್ ಕಿರಗಂದೂರು ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಐಪಿಎಲ್ ಮತ್ತು ಕರ್ನಾಟಕ ಚುನಾವಣೆಗಳ ಝೇಂಕಾರದ ನಡುವೆಯೇ ಏಪ್ರಿಲ್ 28 ರಂದು ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆಯ ಬಗ್ಗೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.
ರಾಘವೇಂದ್ರ ಸ್ಟೋರ್ಸ್ ಚಿತ್ರತಂಡ
ರಾಘವೇಂದ್ರ ಸ್ಟೋರ್ಸ್ ಚಿತ್ರತಂಡ

ಐಪಿಎಲ್ ಮತ್ತು ಕರ್ನಾಟಕ ಚುನಾವಣೆಗಳ ಝೇಂಕಾರದ ನಡುವೆಯೇ ಏಪ್ರಿಲ್ 28 ರಂದು ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆಯ ಬಗ್ಗೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ. ಗುರುವಾರ ನಡೆದ ಸಕ್ಸಸ್ ಮೀಟ್‌ನಲ್ಲಿ ಜಗ್ಗೇಶ್ ಮಾತನಾಡಿ, ಚಿತ್ರ ಬಿಡುಗಡೆಯ ಸಮಯದ ಬಗ್ಗೆ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದರೂ, ಚಿತ್ರವು ಕುಟುಂಬ ಪ್ರೇಕ್ಷಕರಿಂದ ಗಮನ ಸೆಳೆಯುತ್ತಿದೆ ಎಂದರು.

'ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಪ್ರೇಕ್ಷಕರನ್ನು ಸೆಳೆಯಲು ಉತ್ತಮವಾದ ಕಂಟೆಂಟ್ ಇದ್ದರೆ ಸಾಕು ಎಂದು ನಂಬಿದ್ದರು ಮತ್ತು ಅವರ ನಂಬಿಕೆ ಈಗ ನಿಜವಾಯಿತು' ಎಂದ ಜಗ್ಗೇಶ್ ಅವರು, ನಿರ್ದೇಶಕರು, ಛಾಯಾಗ್ರಾಹಕರು ಮತ್ತು ಸಂಗೀತ ನಿರ್ದೇಶಕರು ಮತ್ತು ಅವರ ಶ್ರಮಕ್ಕಾಗಿ ಇಡೀ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. 

ದತ್ತಣ್ಣ ಕೂಡ ಚಿತ್ರಕ್ಕೆ ದೊರಕುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದ ವಿಶಿಷ್ಟ ಪರಿಕಲ್ಪನೆ ಮತ್ತು ಸಂದೇಶವನ್ನು ಜನರು ಒಪ್ಪಿಕೊಂಡಿದ್ದಾರೆ. ಕ್ಲಿಷ್ಟಕರ ಚಿತ್ರವನ್ನು ನಿರ್ವಿುಸಿರುವ ನಿರ್ದೇಶಕರ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, ಜಗ್ಗೇಶ್ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ರಾಘವೇಂದ್ರ ಸ್ಟೋರ್ಸ್‌ ಮೂಲಕ ಕಮ್ ಬ್ಯಾಕ್ ಮಾಡಿರುವ ನಟಿ ಶ್ವೇತಾ ಶ್ರೀವಾತ್ಸವ ಮಾತನಾಡಿ, ಇದು ಅವರ ವೃತ್ತಿಜೀವನದ ಮಹತ್ವದ ತಿರುವು ಎಂದು ಹೇಳಿದರು. 'ಇಂತಹ ಉತ್ತಮ ಚಿತ್ರದ ಭಾಗವಾಗಲು ಮತ್ತು ಜಗ್ಗೇಶ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಕ್ಕಾಗಿ ನಾನು ಹೆಮ್ಮೆಪಡುತ್ತೇನೆ' ಎಂದರು.

ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮಾತನಾಡಿ, ಪ್ರೇಕ್ಷಕರ ಆದ್ಯತೆಗಳನ್ನು ಅಳೆಯುವಲ್ಲಿ ವಿಜಯ್ ಕಿರಗಂದೂರ್ ಪರಿಣಿತಿ ಹೊಂದಿದೆದ್ದಾರೆ. ಈ ಯಶಸ್ಸು ಅವರಿಗೆ ಸಲ್ಲಬೇಕು ಮತ್ತು ಚಿತ್ರವು ಜನರ ಮೂಲಕವೇ ಪ್ರಚಾರ ಪಡೆಯುತ್ತಿರುವುದು ಯಶಸ್ಸಿಗೆ ಕಾರಣ ಎಂದು ಹೇಳಿದರು.

ಜಗ್ಗೇಶ್ ಅವರು 42 ವರ್ಷಗಳ ವೃತ್ತಿಜೀವನದ ಸಂಪೂರ್ಣ ಅನುಭವ ಹೊಂದಿದ್ದಾರೆ. ಇದು ನನ್ನ್ ವಯಸ್ಸಿಗಿಂತಲೂ ಹೆಚ್ಚಿದೆ. ಚಿತ್ರೀಕರಣದ ಸಮಯದಲ್ಲಿ ಅವರು ದೊಡ್ಡ ಆಸ್ತಿಯಾಗಿದ್ದರು. ರಾಘವೇಂದ್ರ ಸ್ಟೋರ್ಸ್ ಪ್ರಯೋಗಾತ್ಮಕ ಮತ್ತು ಮನರಂಜನೆಯ ಚಿತ್ರವಾಗಿ ಕಂಡುಬಂದಿದೆ ಮತ್ತು ಅದು ಪ್ರೇಕ್ಷಕರಿಗೆ ಇಷ್ಟವಾಗಿದೆ ಮತ್ತು ಸಾಮಾನ್ಯ ಜನರೊಂದಿಗೆ ಬೆಸೆದುಕೊಂಡಿದೆ ಎಂದು ಸಂತೋಷ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com