ಮತ್ತೆ ಒಂದಾದ 'ಗುಳ್ಟು' ಜೋಡಿ : ಹೊಸ ಸಿನಿಮಾದಲ್ಲಿ ನವೀನ್ ಶಂಕರ್- ಜನಾರ್ದನ್ ಚಿಕ್ಕಣ್ಣ ಮೋಡಿ!
'ಗುಳ್ಟು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
Published: 09th May 2023 01:21 PM | Last Updated: 09th May 2023 02:35 PM | A+A A-

ನವೀನ್ ಶಂಕರ್ ಮತ್ತು ಜನಾರ್ದನ್ ಚಿಕ್ಕಣ್ಣ
'ಗುಳ್ಟು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ನವೀನ್ ಶಂಕರ್ ಮತ್ತು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮತ್ತೊಂದು ಸಿನಿಮಾಗೆ ಕೈಜೋಡಿಸಲು ಯೋಜಿಸುತ್ತಿದ್ದಾರೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು ನವೀನ್ ಖಚಿತಪಡಿಸಿದ್ದಾರೆ.
ಈಮಧ್ಯೆ ಜನಾರ್ದನ್ ತಮ್ಮ ಎರಡನೇ ಚಿತ್ರ ಅಜ್ಞಾತವಾಸಿಯಲ್ಲಿ ನಿರತರಾಗಿದ್ದಾರೆ. ನನ್ನ ಕಡೆಯಿಂದ ಕ್ಷೇತ್ರಪತಿ ಬಿಡುಗಡೆಗೆ ಸಿದ್ಧವಾಗುತ್ತಿದೆ, ಇದಾದ ಬಳಿಕವಷ್ಟೇ ಜನಾರ್ದನ್ ಅವರ ಜತೆ ನನ್ನ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ನವೀನ್ ಹೇಳಿದ್ದಾರೆ. ನಾವು ಹೊಸತಾದನ್ನು ಮಾಡಬೇಕು, ಹೀಗಾಗಿ ಇದಕ್ಕೆ ಸಮಯ ಹಿಡಿಯುತ್ತದೆ ಎಂದಿದ್ದಾರೆ.
ನವೀನ್ ತಮ್ಮ ಚಿತ್ರಗಳ ಮೂಲಕ ಸತತ ಯಶಸ್ಸು ಪಡೆಯುತ್ತಿದ್ದಾರೆ. ಹೊಂದಿಸಿ ಬರೆಯಿರಿ (2023) ಉತ್ತಮ ಪ್ರದರ್ಶನವನ್ನು ಹೊಂದಿದ್ದು ಪ್ರಸ್ತುತ ಡಿಜಿಟಲ್ ವೇದಿಕೆಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಕಂಡಿದೆ.
ಇದನ್ನೂ ಓದಿ: ಇದು ಸಾಮಾನ್ಯ ವಿಲನ್ ಪಾತ್ರವಲ್ಲ, ಸಾಕಷ್ಟು ಆಳವನ್ನು ಹೊಂದಿದೆ: ಗುರುದೇವ ಹೊಯ್ಸಳ ಚಿತ್ರದಲ್ಲಿ ನವೀನ್ ಶಂಕರ್
ಎಲ್ಲಕ್ಕಿಂತ ಹೆಚ್ಚಾಗಿ, ಹೊಯ್ಸಳ ಸಿನಿಮಾದಲ್ಲಿ ಮಾಡಿರುವ ಖಳನಾಯಕನ ಪಾತ್ರ ಗಮನ ಸೆಳೆದಿದೆ. ಹೊಯ್ಸಳ ನಂತರ, ನಾನು ಅಂತಹ ಹೆಚ್ಚಿನ ಪಾತ್ರಗಳನ್ನು ಸ್ವೀಕರಿಸುತ್ತೇನೆ ಎಂದು ನಿರೀಕ್ಷಿಸಿದ್ದೇನೆ, ಆದರೆ ಕುತೂಹಲಕಾರಿಯಾಗಿ, ನಾಯಕನ ಪಾತ್ರಕ್ಕಾಗಿ ಆಹ್ವಾನ ಬರುತ್ತಿದೆ ಎಂದು ನವೀನ್ ಹೇಳುತ್ತಾರೆ.
ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ನನಗೆ ಆ ಅನುಭವವಾಯಿತು. ಸಿನಿಮಾ ನಿರ್ಮಾಪಕರು ಕೂಡ ಮಾಸ್ ಸಬ್ಜೆಕ್ಟ್‌ಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಸರಿಯಾದ ಸ್ಕ್ರಿಪ್ಟ್‌ಗಳ ಆಯ್ಕೆಯಲ್ಲಿ ನಾನು ಹೆಚ್ಚು ಜಾಗರೂಕನಾಗಿರುತ್ತೇನೆ. ಜನಾರ್ದನ್ ಜೊತೆಗಿನ ಪ್ರಾಜೆಕ್ಟ್ ವಿಶೇಷವಾಗಿರುತ್ತದೆ ಎಂದು ನವೀನ್ ಹೇಳಿದ್ದಾರೆ. ಇದರ ನಡುವೆ ಅವರು ಮುಂದಿನ ಕ್ಷೇತ್ರಪತಿ ಸಿನಿಮಾ ಜುಲೈ ನಲ್ಲಿ ರಿಲೀಸ್ ಆಗಲಿದೆ.