ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ; ಕೆಜಿಎಫ್, ಕಾಂತಾರ ಸಿನಿಮಾಗಳಿಂದ ಕನ್ನಡದ ನಟರಿಗೆ ಗೌರವ: ಅರ್ಜುನ್ ಗೌಡ
ರುಸ್ತುಂ, ಒಡೆಯ, ಆ ದೃಶ್ಯ, ಏಕಲವ್ಯ, ಮತ್ತು ರೈಡರ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡ ಚಲನಚಿತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ನಟ ಅರ್ಜುನ್ ಗೌಡ, ಜ್ಞಾನಸಾಗರ್ ದ್ವಾರಕಾ ಅವರ ಹರೋಮ್ ಹರ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.
Published: 15th May 2023 01:14 PM | Last Updated: 15th May 2023 01:14 PM | A+A A-

ಅರ್ಜುನ್ ಗೌಡ
ರುಸ್ತುಂ, ಒಡೆಯ, ಆ ದೃಶ್ಯ, ಏಕಲವ್ಯ, ಮತ್ತು ರೈಡರ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡ ಚಲನಚಿತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ನಟ ಅರ್ಜುನ್ ಗೌಡ, ಜ್ಞಾನಸಾಗರ್ ದ್ವಾರಕಾ ಅವರ ಹರೋಮ್ ಹರ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಸುಧೀರ್ ಬಾಬು ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅರ್ಜುನ್ ಗೌಡ ಮುಖ್ಯ ಪ್ರತಿನಾಯಕನಾಗಿ ನಟಿಸಿದ್ದಾರೆ. ಆರು ದಿನಗಳ ಚಿತ್ರೀಕರಣ ಮುಗಿಸಿರುವ ನಟ, ಚಿತ್ರದ ತಮ್ಮ ಲುಕ್ ಅನ್ನು ಹಂಚಿಕೊಂಡಿದ್ದಾರೆ. 'ಇದು ತೆಲುಗಿನಲ್ಲಿ ನನ್ನ ಆರಂಭವಷ್ಟೇ. ಇನ್ನೂ ಹೆಚ್ಚಿನವುಗಳು ಬರಲಿವೆ ಮತ್ತು ಬಹು ಭಾಷೆಗಳಲ್ಲಿಯೂ ಸಹ. ಒಮ್ಮೆ ಪ್ರಕಾಶ್ ರಾಜ್ ಅವರು ಅನುಸರಿಸಿದ ಮಾರ್ಗವನ್ನು ನಾನು ಅನುಸರಿಸುತ್ತಿದ್ದೇನೆ' ಎಂದು ಅರ್ಜುನ್ ಹೇಳುತ್ತಾರೆ.
ಬೇರೆ ಇಂಡಸ್ಟ್ರಿಗಳ ನಿರ್ಮಾಪಕರು ಕನ್ನಡದ ಪ್ರತಿಭೆಗೆ ತೆರೆದುಕೊಂಡಿರುವುದಕ್ಕೆ ಅರ್ಜುನ್ ಖುಷಿಯಾಗಿದ್ದಾರೆ. 'ಕೆಜಿಎಫ್ ಮತ್ತು ಕಾಂತಾರದಂತಹ ಚಿತ್ರಗಳಿಗೆ ಧನ್ಯವಾದಗಳು. ನನ್ನಂತಹ ನಟರು ಇತರ ಭಾಷೆಗಳಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಿದ್ದಾರೆ ಮತ್ತು ಇದು ಸ್ವಾಗತಾರ್ಹವಾಗಿದೆ' ಎಂದು ಅವರು ಹೇಳುತ್ತಾರೆ.
ಅರ್ಜುನ್ ಪ್ರಕಾರ, 'ಹರೋಮ್ ಹರ ಸಿನಿಮಾ ಒಂದು ಸಾಹಸಮಯ ಚಿತ್ರವಾಗಿದ್ದು, ಇದು 80 ರ ದಶಕದಲ್ಲಿ ನಡೆಯುತ್ತದೆ. ಇದು ಒಬ್ಬ ಸಾಮಾನ್ಯ ಮನುಷ್ಯನ ಕಥೆ, ಅವನು ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ, ಆರ್ಥಿಕ ತೊಂದರೆಯಲ್ಲಿ ಸಿಲುಕುತ್ತಾನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ವ್ಯವಹಾರದಲ್ಲಿ ತೊಡಗುತ್ತಾನೆ. ಆತ ಈ ಜಗತ್ತಿನಲ್ಲಿ ಹೇಗೆ ದೊಡ್ಡವನಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ' ಎಂದು ವಿವರಿಸುತ್ತಾರೆ ಅರ್ಜುನ್.
ಚಿತ್ರಕ್ಕೆ ಚೈತಮ್ ಭಾರದ್ವಾಜ್ ಅವರ ಸಂಗೀತವಿದೆ ಮತ್ತು ಅರವಿಂದ್ ವಿಶ್ವನಾಥನ್ ಅವರ ಛಾಯಾಗ್ರಹಣವಿದೆ.