ಅಮೆಜಾನ್ ಫ್ರೈಂ ವಿಡಿಯೋ, ನೆಟ್​​ಫ್ಲಿಕ್ಸ್​ ವಿರುದ್ಧ ನಿರ್ದೇಶಕ ಮಂಸೋರೆ ಕಿಡಿ!

ಅಮೆಜಾನ್ ಫ್ರೈಂ ವಿಡಿಯೋ, ನೆಟ್ ಫ್ಲಿಕ್ಸ್ ನಂತರ ಓಟಿಟಿ ವೇದಿಕೆಗಳ ವಿರುದ್ಧ ಖ್ಯಾತ ನಿರ್ದೇಶಕ ಮಂಸೋರೆ ಕಿಡಿಕಾರಿದ್ದಾರೆ. ಕಾರಣ ಅವರಿಗೆ ಕನ್ನಡದ ರಿಯಾಲಿಸ್ಟಿಕ್ ಮತ್ತು ಕಂಟೆಂಟ್ ಸಿನಿಮಾ ಬೇಡವಂತೆ. ಹಾಗಂತಾ, ಮಂಸೋರೆ ಅವರು ಟ್ವೀಟ್ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.
ನಿರ್ದೇಶಕ ಮಂಸೋರೆ
ನಿರ್ದೇಶಕ ಮಂಸೋರೆ

ಬೆಂಗಳೂರು: ಅಮೆಜಾನ್ ಫ್ರೈಂ ವಿಡಿಯೋ, ನೆಟ್ ಫ್ಲಿಕ್ಸ್ ನಂತರ ಓಟಿಟಿ ವೇದಿಕೆಗಳ ವಿರುದ್ಧ ಖ್ಯಾತ ನಿರ್ದೇಶಕ ಮಂಸೋರೆ ಕಿಡಿಕಾರಿದ್ದಾರೆ. ಕಾರಣ ಅವರಿಗೆ ಕನ್ನಡದ ರಿಯಾಲಿಸ್ಟಿಕ್ ಮತ್ತು ಕಂಟೆಂಟ್ ಸಿನಿಮಾ ಬೇಡವಂತೆ. ಹಾಗಂತಾ, ಮಂಸೋರೆ ಅವರು ಟ್ವೀಟ್ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.

ಓಟಿಟಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಯಾವಾಗ ಎಂದು ಕೇಳುತ್ತಿರುವ ಸ್ನೇಹಿತರ ಗಮನಕ್ಕೆ ಫ್ರೈಂ ವಿಡಿಯೋ ಅವರಿಗೆ ನಮ್ಮ ರಿಯಾಲಿಸ್ಟಿಕ್ , ಕನ್ನಡ  ಕಂಟೆಂಟ್ ಸಿನಿಮಾ ಬೇಡವಂತೆ. ನೆಟ್ ಫ್ಲಿಕ್ಸ್ ಅವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲವಂತೆ. ನಮ್ಮ  ಸಿನಿಮಾವನ್ನು ಓಮ್ಮೆಯೂ ನೋಡದೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಸೋರೆ 'ಹರಿವು', 'ನಾತಿಚರಾಮಿ', 'ಆಕ್ಟ್-1978 ಮತ್ತಿತರ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ವಿಮರ್ಶಾಕರ ಪ್ರಶಂಸೆಗೂ ಪಾತ್ರರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com