ಕಿರುತೆರೆ ಮೂಲಕ ಫೇಮಸ್ ಆದ ನಟ ನಿತೇಶ್ ಪಾಂಡೆ ನಿಧನರಾಗಿದ್ದಾರೆ.ಅವರಿಗೆ 51 ವರ್ಷ ವಯಸ್ಸಾಗಿತ್ತು.
ನಿತೇಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಕೇವಲ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯ ಮೂಲಕವೂ ನಿತೇಶ್ ಪಾಂಡೆ ಫೇಮಸ್ ಆಗಿದ್ದರು.
1995ರಿಂದ ನಿತೇಶ್ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಧಾರಾವಾಹಿಗಳ ಜೊತೆ ಸಿನಿಮಾ ಕೂಡ ಮಾಡಿದ್ದಾರೆ. ಅನುಪಮಾ ಧಾರಾವಾಹಿ ಹಿಂದಿಯ ಸ್ಟಾರ್ ಪ್ಲಸ್ನಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ಅವರು ಮಾಡುತ್ತಿದ್ದರು.
ಪ್ಯಾರ್ ಕ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಈಗ ನಿತೇಶ್ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಆಘಾತ ತಂದಿದೆ. ನಿತೇಶ್ ಅವರ ಭಾವ, ನಿರ್ಮಾಪಕ ಸಿದ್ದಾರ್ಥ್ ನಗರ್ ಈ ಬಗ್ಗೆ ಮಾತನಾಡಿದ್ದಾರೆ.
ನಿತೇಶ್ ಅವರು ನನಗಿಂತ ಚಿಕ್ಕವರಾಗಿದ್ದರು, ಅವರು ತುಂಬಾ ಉತ್ಸಾಹಭರಿತ ವ್ಯಕ್ತಿಯಾಗಿದ್ದರು ಮತ್ತು ಅವರಿಗೆ ಯಾವುದೇ ಹೃದಯ ಕಾಯಿಲೆಯ ಇತಿಹಾಸವಿರಲಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಹಿಂದಿ ಕಿರುತೆರೆಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತಪಟ್ಟರು.
Advertisement