ನನಗೀಗ 61, ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡಲಿ; ನಟ ಜಗ್ಗೇಶ್ ಮಾತಿನ ಹಿಂದಿನ ಮರ್ಮವೇನು?

ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ. ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು!
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಕೆಲವು ದಿನಗಳ ಹಿಂದೆ ನಟ ಜಗ್ಗೇಶ್‌, ಪ್ರತಾಪ್‌ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್‌ ಮಾಡಿದ್ದಾರೆ ಎನ್ನುವ ಸ್ಕ್ರೀನ್‌ ಶಾಟ್‌ ಚಿತ್ರವೊಂದು ಹರಿದಾಡಿತ್ತು. ಈ ಕುರಿತು ಜಗ್ಗೇಶ್‌ ಸ್ಪಷ್ಟನೆ ನೀಡಿದ್ದು, ತಿರುಚಲಾದ ಪೋಸ್ಟ್‌ಗಳನ್ನು ಶೇರ್‌ ಮಾಡಲಾಗಿದೆ ಎಂದಿದ್ದಾರೆ.

ಮಿತ್ರರೆ, ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ. ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು!

ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ ಒಂದುವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ! ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ!  ನನ್ನ ಮೇಲೆ ನಂಬಿಕೆಯಿರಲಿ ಅಂತ post ಗಳು ಬಂದರೆ share ಮಾಡಿ I will handle thankyou ಎಂದು ಬರೆದುಕೊಂಡಿದ್ದಾರೆ, ಆದರೆ ಡ್ರೋನ್‌ ಪ್ರತಾಪ್‌ ಅವರ ಹೆಸರನ್ನು ಜಗ್ಗೇಶ್ ಎಲ್ಲಿಯೂ ಉಲ್ಲೇಖಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com