ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೆ ಸೂಪರ್ ಬೈಕ್ ಚಾಲನೆ: ನಟ ಧನುಷ್ ಪುತ್ರ ಯಾತ್ರಾಗೆ ನಿಯಮ ಉಲ್ಲಂಘನೆ ದಂಡ!
ಹೆಲ್ಮೆಟ್-ಪರವಾನಗಿ ಇಲ್ಲದೇ ಸೂಪರ್ ಬೈಕ್ ಚಾಲನೆ ಮಾಡಿದ ಆರೋಪದ ಮೇರೆಗೆ ಖ್ಯಾತ ತಮಿಳು ನಟ ಧನುಷ್ ಪುತ್ರ ಯಾತ್ರಾಗೆ ತಮಿಳುನಾಡು ಪೊಲೀಸರು ದಂಡ ವಿಧಿಸಿದ್ದಾರೆ.
Published: 21st November 2023 10:08 PM | Last Updated: 22nd November 2023 01:25 PM | A+A A-

ನಟ ಧನುಷ್ ಹಾಗೂ ಅವರ ಪುತ್ರರು
ಚೆನ್ನೈ: ಹೆಲ್ಮೆಟ್-ಪರವಾನಗಿ ಇಲ್ಲದೇ ಸೂಪರ್ ಬೈಕ್ ಚಾಲನೆ ಮಾಡಿದ ಆರೋಪದ ಮೇರೆಗೆ ಖ್ಯಾತ ತಮಿಳು ನಟ ಧನುಷ್ ಪುತ್ರ ಯಾತ್ರಾಗೆ ತಮಿಳುನಾಡು ಪೊಲೀಸರು ದಂಡ ವಿಧಿಸಿದ್ದಾರೆ.
ಚೆನ್ನೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಅಥವಾ ಹೆಲ್ಮೆಟ್ ಇಲ್ಲದೆ ಸೂಪರ್ ಬೈಕ್ ಓಡಿಸಿದ್ದಕ್ಕಾಗಿ ತಮಿಳುನಾಡು ಸಂಚಾರ ಪೊಲೀಸರು ಧನುಷ್ ಅವರ ಹಿರಿಯ ಮಗ ಯಾತ್ರಾ (17 ವರ್ಷ) ಗೆ 1000 ರೂಪಾಯಿ ದಂಡ ವಿಧಿಸಿದ್ದಾರೆ. ಯಾತ್ರಾ ಅವರಿಗೆ ಇನ್ನೂ 18 ವರ್ಷವಾಗದ ಕಾರಣ, ಅವರು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಹರಾಗಿಲ್ಲ. ಪೊಲೀಸ್ ಮೂಲಗಳ ಪ್ರಕಾರ ಯಾತ್ರಾ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ಟ್ರೈನರ್ ಗಳಿಂದ ಬೈಕ್ ಓಡಿಸಲು ಕಲಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಬೈಕ್ ಚಲಾಯಿಸುವಾಗ ಯಾತ್ರಾ ಮಾಸ್ಕ್ ಹಾಕಿಕೊಂಡಿದ್ದರು. ವೀಡಿಯೋದಲ್ಲಿ ಬೈಕ್‌ನ ನಂಬರ್ ಪ್ಲೇಟ್ ಕೂಡ ಕಾಣಿಸುತ್ತಿಲ್ಲ. ಸವಾರನ ಗುರುತನ್ನು ಖಚಿತಪಡಿಸಿಕೊಳ್ಳಲು, ಸಂಚಾರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಬಳಿಕ ಅದು ಯಾತ್ರಾ ಎಂದು ಖಚಿತವಾದಾಗ ಆತನ ತಾಯಿ ಐಶ್ವರ್ಯಾ ರಜನಿಕಾಂತ್ ಅವರನ್ನು ಪ್ರಶ್ನಿಸಿದರು. ಆಗ ಅದು ನಿಜಕ್ಕೂ ಯಾತ್ರಾ ಎಂದು ದೃಢಪಟ್ಟಿತ್ತು. ಬಳಿಕ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಬಳಿಕ ವೀಡಿಯೊವನ್ನು ಡಿಲೀಟ್ ಮಾಡಲಾಗಿದೆ.
ಇದನ್ನೂ ಓದಿ: ಚೆನ್ನೈ: ಹಿರಿಯ ನಟ ಕ್ಯಾಪ್ಟನ್ ವಿಜಯಕಾಂತ್'ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
ಅಂದಹಾಗೆ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ 2022 ರಲ್ಲಿ ಬೇರ್ಪಟ್ಟಿದ್ದರು. ಅವರ ಇಬ್ಬರು ಮಕ್ಕಳಾದ ಯಾತ್ರಾ ಮತ್ತು ಲಿಂಗ (13) ಇಬ್ಬರೂ ಪೋಷಕರ ಸಹ-ಪೋಷಣೆಯಲ್ಲಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಐಶ್ವರ್ಯಾ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಮ್' ನಲ್ಲಿ ಕೆಲಸ ಮಾಡುತ್ತಿದ್ದು, ಅವರ ತಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ನಟನೆಯ ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದರಲ್ಲಿ ವಿಷ್ಣು, ವಿಶಾಲ್ ಮತ್ತು ವಿಕ್ರಾಂತ್ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿತ್ತು. ಮತ್ತೊಂದೆಡೆ, ಅರುಣ್ ಮಾಥೇಶ್ವರನ್ ಬರೆದು ನಿರ್ದೇಶಿಸಿದ ಪಿರಿಯಾಡಿಕ್ ಆ್ಯಕ್ಷನ್ ಡ್ರಾಮಾ ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಮತ್ತು ಹಿಂದಿ ಚಲನಚಿತ್ರ "ತೇರೆ ಇಷ್ಕ್ ಮೇ" ನಲ್ಲಿ ಧನುಷ್ ಕಾಣಿಸಿಕೊಳ್ಳುತ್ತಿದ್ದಾರೆ.