ಭಾರತದ ಕಾಮಿಡಿಯನ್ ವೀರ್ ದಾಸ್ ಗೆ ಇಂಟರ್ನ್ಯಾಷನಲ್ ಎಮ್ಮಿಸ್ ಪ್ರಶಸ್ತಿ
ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಸರ್ವೋತ್ತಮ ಪ್ರಶಸ್ತಿಯೆಂದು ಎಮ್ಮಿ ಪ್ರಶಸ್ತಿಯನ್ನು ಪರಿಗಣಿಸಲಾಗಿದೆ. ಬೆರಳೆಣಿಕೆಯ ಭಾರತೀಯರಷ್ಟೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಭಾರತದ ಜನಪ್ರಿಯ ಕಮಿಡಿಯನ್ ವೀರ್ ದಾಸ್.
Published: 21st November 2023 09:53 AM | Last Updated: 21st November 2023 09:53 AM | A+A A-

ವೀರ್ ದಾಸ್
ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಸರ್ವೋತ್ತಮ ಪ್ರಶಸ್ತಿಯೆಂದು ಎಮ್ಮಿ ಪ್ರಶಸ್ತಿಯನ್ನು ಪರಿಗಣಿಸಲಾಗಿದೆ. ಬೆರಳೆಣಿಕೆಯ ಭಾರತೀಯರಷ್ಟೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಭಾರತದ ಜನಪ್ರಿಯ ಕಮಿಡಿಯನ್ ವೀರ್ ದಾಸ್.
ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ವೀರ್ ದಾಸ್ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿಯನ್ನು ‘ಡೆರ್ರಿ ಗರ್ಲ್ಸ್-ಸೀಸನ್ 3’ ಜೊತೆಗೆ ಹಂಚಿಕೊಳ್ಳಲಾಗಿದೆ. ‘ವೀರ್ ದಾಸ್; ಲ್ಯಾಂಡಿಂಗ್’ ಹಾಗೂ ‘ಡೆರ್ರಿ ಗರ್ಲ್ಸ್-ಸೀಸನ್ 3’ ಎರಡೂ ಶೋಗಳಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಅಮೆರಿಕ ಹಾಗೂ ಭಾರತದ ಸಂಸ್ಕೃತಿಗಳ ಬಗ್ಗೆ ರಾಜಕೀಯ ದೃಷ್ಟಿಕೋನದಿಂದ ‘ವೀರ್ ದಾಸ್; ಲ್ಯಾಂಡಿಂಗ್’ ಶೋನಲ್ಲಿ ಮಾತನಾಡಿದ್ದಾರೆ. ರಾಜಕಾರಣಿಯೊಬ್ಬ ಈ ಭಿನ್ನತೆಯನ್ನು ಹೇಗೆ ಗ್ರಹಿಸುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಜೊತೆಗೆ ಭಾರತೀಯನಾಗಿ ಅಮೆರಿಕದಲ್ಲಿ ಬೆಳೆದ ತನಗೆ ಸಂಸ್ಕೃತಿ, ಸ್ವಂತ ನೆಲ ಎರಡೂ ಇಲ್ಲದ ಬಗ್ಗೆಯೂ ವೀರ್ ದಾಸ್ ಮಾತನಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಒಳಗೊಂಡ 'ಅಬಂಡನ್ಸ್ ಇನ್ ಮಿಲೆಟ್ಸ್' ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ
ವೀರ್ ದಾಸ್ ಭಾರತದ ಜನಪ್ರಿಯ ಕಮಿಡಿಯನ್. ಅವರು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತುಂಬಿದ ಗೃಹಗಳ ಕಾಮಿಡಿ ಶೋಗಳನ್ನು ನೀಡಿದ್ದಾರೆ. ಅವರ ಕೆಲವು ಶೋಗಳು ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ವಿದೇಶಗಳಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ವೀರ್ ದಾಸ್ ವಿರುದ್ಧ ಆರೋಪ ಮಾಡಲಾಗಿತ್ತು. ದೂರು ಸಹ ದಾಖಲಾಗಿತ್ತು. ವೀರ್ ದಾಸ್ ಅನ್ನು ಭಯೋತ್ಪಾದಕ ಎಂದೂ ಸಹ ಕರೆಯಲಾಗಿತ್ತು. ಈಗ ಅವರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಲಭಿಸಿದೆ.
ವೀರ್ ದಾಸ್ ಮಾತ್ರವೇ ಅಲ್ಲದೆ ಭಾರತೀಯ ಟಿವಿ ಜಗತ್ತಿನ ರಾಣಿ ಎಂದೇ ಕರೆಯಲಾಗುವ ಏಕ್ತಾ ಕಪೂರ್ಗೂ ಪ್ರಶಸ್ತಿ ಲಭಿಸಿದೆ. ಭಾರತೀಯ ಟೆಲಿವಿಷನ್ ಜಗತ್ತಿನಲ್ಲಿ ತಂಡ ಬದಲಾವಣೆ ಹಾಗೂ ವೃತ್ತಿಜೀವನದ ಸಾಧನೆಗಾಗಿ ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
‘ಡೆಲ್ಲಿ ಕ್ರೈಂ’ ಸರಣಿಯ ನಟಿ ಶಫಾಲಿ ಶಾ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು ಆದರೆ ಅವರಿಗೆ ಪ್ರಶಸ್ತಿ ಕೊನೆಯ ಹಂತದಲ್ಲಿ ಕೈತಪ್ಪಿತು. ಜಿಮ್ ಸರ್ಬ್ ಅವರುಗಳು ಸಹ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಲಿಲ್ಲ. ವೀರ್ ದಾಸ್ ಎರಡು ಬಾರಿ ನಾಮಿನೇಟ್ ಆಗಿದ್ದರು, ಆದರೆ ಈ ಬಾರಿ ಅವರಿಗೆ ಪ್ರಶಸ್ತಿ ದೊರೆತಿದೆ.