ಅನೀಶ್ ನಟನೆಯ 'ಮಾಯಾನಗರಿ' ಚಿತ್ರದಲ್ಲಿ ಹಿರಿಯ ನಟ ದ್ವಾರಕೀಶ್ ಪ್ರಮುಖ ಪಾತ್ರ!
ಶಂಕರ್ ಆರಾಧ್ಯ ನಿರ್ದೇಶನದ ಮಾಯಾನಗರಿ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಅನೀಶ್ ಮತ್ತು ಶ್ರಾವ್ಯಾ ರಾವ್ ನಟನೆಯ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ದ್ವಾರಕೀಶ್ ಅವರು ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.
Published: 21st November 2023 01:34 PM | Last Updated: 21st November 2023 08:34 PM | A+A A-

ಮಾಯಾನಗರಿ ಚಿತ್ರದ ಸ್ಟಿಲ್ - ಹಿರಿಯ ನಟ ದ್ವಾರಕೀಶ್
ಶಂಕರ್ ಆರಾಧ್ಯ ನಿರ್ದೇಶನದ ಮಾಯಾನಗರಿ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಅನೀಶ್ ಮತ್ತು ಶ್ರಾವ್ಯಾ ರಾವ್ ನಟನೆಯ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ದ್ವಾರಕೀಶ್ ಅವರು ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.
ದ್ವಾರಕೀಶ್ ಅವರ ಮಹತ್ವದ ಉಪಸ್ಥಿತಿಯೊಂದಿಗೆ ನಿರ್ದೇಶಕ ಶಂಕರ್ ಅವರು ಚಿತ್ರಕಥೆಯಲ್ಲಿ ನೈಜ-ಜೀವನದ ಘಟನೆಗಳನ್ನು ಸಂಕೀರ್ಣವಾಗಿ ಹೆಣೆದಿದ್ದಾರೆ. ಈ ಕುರಿತು ಮಾತನಾಡುವ ಅವರು, ಮಾಯಾನಗರಿ ಸಿನಿಮಾವು ಹಾರರ್, ಆ್ಯಕ್ಷನ್ ಮತ್ತು ಕೌಟುಂಬಿಕ ಭಾವನೆಗಳ ಮಿಶ್ರಣವಾಗಿದೆ ಎನ್ನುತ್ತಾರೆ. ಚಿತ್ರದಲ್ಲಿ ಅನೀಶ್ ಶಂಕರ್ ನಾಗ್ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯುವ ನಿರ್ದೇಶಕನ ಹೋರಾಟವನ್ನು ಚಿತ್ರಿಸಿದ್ದಾರೆ, ಜೊತೆಗೆ ದ್ವಾರಕೀಶ್ ಅವರು ನಿಜ ಜೀವನದ ಪಾತ್ರವನ್ನು ನಿರ್ವಹಿಸಿದ್ದಾರೆ.
ಹಿರಿಯ ನಟರೊಂದಿಗೆ ತೆರೆ ಹಂಚಿಕೊಳ್ಳಲು ಉತ್ಸುಕರಾಗಿರುವ ಅನೀಶ್, 'ದ್ವಾರಕೀಶ್ ಅವರಂತಹ ಹಿರಿಯ ನಟರೊಂದಿಗೆ ಕೆಲಸ ಮಾಡುವುದು ನಂಬಲಾಗದ ಅವಕಾಶ. ನಾನು ಸಿನಿಮಾ ನಿರ್ದೇಶನದ ಕನಸು ಹೊತ್ತು ಬರುವ ಯುವಕನ ಪಾತ್ರವನ್ನು ನಿರ್ವಹಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನಿರ್ದೇಶಕನಾಗುವ ಕನಸು ಹೊತ್ತ ಯುವ ಪ್ರತಿಭೆ ಪಾತ್ರದಲ್ಲಿ ಅನೀಶ್, ಸೆನ್ಸಾರ್ ಪಾಸಾದ 'ಮಾಯಾನಗರಿ'
ಸ್ಯಾಂಡಲ್ ವುಡ್ ಪಿಕ್ಚರ್ಸ್ ಮತ್ತು ಶ್ವೇತಾ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಅವರು ಚಿತ್ರಕ್ಕೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಮತ್ತು ಶ್ರೀನಿವಾಸ್ ಅವರ ಛಾಯಾಗ್ರಹಣ ಇದೆ. ಇನ್ನುಳಿದಂತೆ, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಚಂದ್ರಶೇಖರ್ ಎಡಕಲ್ಲು, ಚಿಕ್ಕಣ್ಣ, ಗಿರಿ ದಿನೇಶ್ ಮತ್ತು ನಿಹಾರಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.