ರಾಜಕೀಯ ವಿಡಂಬನೆಯ 'Politics ಕಲ್ಯಾಣ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ!

ಕನ್ನಡ ಚಲನಚಿತ್ರೋದ್ಯಮವು ಸದ್ಯ ವೈವಿಧ್ಯಮಯ ಸಿನಿಮಾ ಪ್ರಕಾರಗಳಿಗೆ ಸಾಕ್ಷಿಯಾಗುತ್ತಿದೆ. ಹೊಸಬರು ವಿವಿಧ ಸಿನಿಮಾಗಳೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ನಡುವೆ 'Politics ಕಲ್ಯಾಣ' ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ.
ಪಾಲಿಟಿಕ್ಸ್ ಕಲ್ಯಾಣ ಚಿತ್ರದ ಸ್ಟಿಲ್
ಪಾಲಿಟಿಕ್ಸ್ ಕಲ್ಯಾಣ ಚಿತ್ರದ ಸ್ಟಿಲ್

ಕನ್ನಡ ಚಲನಚಿತ್ರೋದ್ಯಮವು ಸದ್ಯ ವೈವಿಧ್ಯಮಯ ಸಿನಿಮಾ ಪ್ರಕಾರಗಳಿಗೆ ಸಾಕ್ಷಿಯಾಗುತ್ತಿದೆ. ಹೊಸಬರು ವಿವಿಧ ಸಿನಿಮಾಗಳೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ನಡುವೆ 'Politics ಕಲ್ಯಾಣ' ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ, ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದರು.

ಜೆಎಂ ಪ್ರಹ್ಲಾದ್ ಬರೆದು ಗಣೇಶ್ ಕೃಷ್ಣ ಮೂರ್ತಿ ನಿರ್ಮಿಸಿರುವ ಈ ಚಿತ್ರಕ್ಕೆ ರಾಜೇಶ್ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರತಂಡ ಸದ್ಯ ಡಿಸೆಂಬರ್‌ನಲ್ಲಿಯೇ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. 

'ನಾವು ಈ ಸಿನಿಮಾಗಾಗಿ ಅನುಭವಿ ಮತ್ತು ಉದಯೋನ್ಮುಖ ಕಲಾವಿದರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಒಂದೇ ಮದುವೆಯ ಸ್ಥಳದಲ್ಲಿ ಕೇವಲ ಐದೇ ದಿನಗಳಲ್ಲಿ ಚಲನಚಿತ್ರವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ್ದೇವೆ' ಎಂದು ನಿರ್ದೇಶಕರು ತಿಳಿಸಿದ್ದಾರೆ. ಚಿತ್ರಕ್ಕೆ ರೋಹನ್ ದೇಸಾಯಿ ಅವರ ಛಾಯಾಗ್ರಹಣ ಮತ್ತು ಸಂಕಲನವಿದ್ದು, ವಿ ಮನೋಹರ್ ಅವರ ಸಂಗೀತ ಸಂಯೋಜನೆಯಿದೆ.

ಚಿತ್ರದ ತಾರಾಗಣದಲ್ಲಿ ಪಂಕಜ್ ಎಸ್ ನಾರಾಯಣ್, ವಿ ಮನೋಹರ್, ಶಂಕರ್ ಅಶ್ವತ್ಥ್, ಮೈಮ್ ಗೋಪಿ, ಗಿರಿಜಾ ಲೋಕೇಶ್, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟೆ, ಸುನೇತ್ರಾ ಪಂಡಿತ್, ಹನುಮಂತೇಗೌಡ, ಪಾಪ ಪಾಂಡು ಚಿದಾನಂದ, ನಾಗೇಂದ್ರ ಶಾ, ಸಸ್ಯ, ವಿಜಯ್ ಭಾಸ್ಕರ್, ನಿಶ್ಚಿತ್ ಶೆಟ್ಟಿ, ರಜನಿ ಶೆಟ್ಟಿ, ತನುಜಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com