
ನಟ ಪ್ರೇಮ್
ಬೆಂಗಳೂರು: ಕಾವೇರಿ ನೀರಿನ ಹೋರಾಟ ಕುರಿತು ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ರಕ್ತದಲ್ಲಿ ಪತ್ರ ಬರೆಯುತ್ತಿರುವ ವಿಡಿಯೋವೊಂದನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಕಾವೇರಿ ನಮ್ಮದು, ಕರ್ನಾಟಕಕ್ಕೆ ದಯವಿಟ್ಟು ನ್ಯಾಯ ಕೊಡಿ ಎಂದು ಅವರು ರಕ್ತದಲ್ಲಿ ಪತ್ರ ಬರೆದಿದ್ದು, ಹಸ್ತದ ಅಚ್ಚನ್ನು ರಕ್ತದಲ್ಲಿ ನಮೂದಿಸಿದ್ದಾರೆ.
ಇದನ್ನೂ ಓದಿ: ಎರಡೂ ರಾಜ್ಯಗಳ ನಾಯಕರು ಕುಳಿತು ಮಾತನಾಡಿ ಕಾವೇರಿ ಸಮಸ್ಯೆ ಬಗೆಹರಿಸಬೇಕು: ನಟ ಶಿವರಾಜ್ ಕುಮಾರ್
ಸಿದ್ಧ ಕಣೋ ಪ್ರಾಣ ಕೊಡೋಕೆ, ಈ ಜಲ, ನೆಲ ನಾಡು ನುಡಿಗೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಕೆಲ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದರೆ, ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ.