'ಮುಗಿಲ್‌ಪೇಟೆ' ಚಿತ್ರ ನಿರ್ದೇಶಕರ ಹೊಸ ಸಿನಿಮಾದಲ್ಲಿ 'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ನಾಯಕ
ಮನೋರಂಜನ್ ಅಭಿನಯದ ಮುಗಿಲ್‌ಪೇಟೆ ಚಿತ್ರ ನಿರ್ದೇಶಿಸಿದ್ದ ಭರತ್ ಎಸ್ ನಾವುಂದ ಅವರು ತಮ್ಮ ಮುಂದಿನ ಯೋಜನೆಯನ್ನು ಕಿಕ್‌ಸ್ಟಾರ್ಟ್ ಮಾಡಲು ಸಜ್ಜಾಗುತ್ತಿದ್ದಾರೆ. ಚಿತ್ರ ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾಗಲಿದ್ದು, ಕೌಟುಂಬಿಕ ಪ್ರತೀಕಾರದ ಕಥೆಯುಳ್ಳ ಸಿನಿಮಾವಾಗಿದೆ. ಪೂರ್ಣ ಪ್ರಮಾಣದ ನಾಯಕನಾಗಿ ತಾಂಡವ್ ರಾಮ್ ಎಂಟ್ರಿ ಕೊಡುತ್ತಿದ್ದಾರೆ.
Published: 02nd October 2023 11:17 AM | Last Updated: 02nd October 2023 05:28 PM | A+A A-

ಭರತ್ ಎಸ್ ನಾವುಂದ - ತಾಂಡವ್ ರಾಮ್
ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಗಿಲ್‌ಪೇಟೆ ಚಿತ್ರ ನಿರ್ದೇಶಿಸಿದ್ದ ಭರತ್ ಎಸ್ ನಾವುಂದ ಅವರು ತಮ್ಮ ಮುಂದಿನ ಯೋಜನೆಯನ್ನು ಕಿಕ್‌ಸ್ಟಾರ್ಟ್ ಮಾಡಲು ಸಜ್ಜಾಗುತ್ತಿದ್ದಾರೆ. ಚಿತ್ರ ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾಗಲಿದ್ದು, ಕೌಟುಂಬಿಕ ಪ್ರತೀಕಾರದ ಕಥೆಯುಳ್ಳ ಸಿನಿಮಾವಾಗಿದೆ. ಪೂರ್ಣ ಪ್ರಮಾಣದ ನಾಯಕನಾಗಿ ತಾಂಡವ್ ರಾಮ್ ಎಂಟ್ರಿ ಕೊಡುತ್ತಿದ್ದಾರೆ.
ಜೋಡಿ ಹಕ್ಕಿ ಧಾರಾವಾಹಿ ಮತ್ತು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸಣ್ಣಪರದೆಯಲ್ಲಿ ಖ್ಯಾತಿ ಗಳಿಸಿದ್ದ ತಾಂಡವ್ ರಾಮ್, ಈ ಹಿಂದೆ ಪೋಷಕ ಪಾತ್ರಗಳಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ನಿರ್ದೇಶಕ ಭರತ್ ಅವರೊಂದಿಗಿನ ಈ ಚಿತ್ರದಲ್ಲಿ ಅವರು ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ.
ಅಕ್ಟೋಬರ್ ಅಂತ್ಯದ ವೇಳೆಗೆ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಯೋಜಿಸಿದ್ದು, ಅಧಿಕೃತ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಕನಿಷ್ಠ 20 ಪ್ರಮುಖ ನಟರನ್ನು ಸಿನಿಮಾಗೆ ಕರೆತರಲು ನಿರ್ದೇಶಕರು ಉದ್ದೇಶಿಸಿದ್ದಾರೆ.
ಇದನ್ನೂ ಓದಿ: ಗಜರಾಮ ಚಿತ್ರದ ಶೂಟಿಂಗ್ ಮುಕ್ತಾಯ, ವಿಶೇಷ ಹಾಡಿಗೆ ರಾಜವರ್ಧನ್ ಜೊತೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ!
ಎ ಕ್ಯೂಬ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಇನ್ನೂ ಹೆಸರಿಡದ ಈ ಯೋಜನೆಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಹಿಂದೆ ಕ್ಷೇತ್ರಪತಿ ಚಿತ್ರಕ್ಕೆ ಕೆಲಸ ಮಾಡಿದ್ದ ಸಾಗರ್ ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ.