ಪ್ರವೀರ್ ಶೆಟ್ಟಿ, ಐಶ್ವರ್ಯ ಗೌಡ ನಟನೆಯ 'ಎಂಗೇಜ್‌ಮೆಂಟ್' ಸಿನಿಮಾದ ಚಿತ್ರೀಕರಣ ಮುಕ್ತಾಯ!
ಸೈರನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಇದೀಗ ತಮ್ಮ ಎರಡನೇ ಸಿನಿಮಾದ ಎಂಗೇಜ್‌ಮೆಂಟ್‌ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ರಾಜು ಬೋನಗಾನಿ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.
Published: 03rd October 2023 11:57 AM | Last Updated: 03rd October 2023 05:27 PM | A+A A-

ಪ್ರವೀರ್ ಶೆಟ್ಟಿ- ಐಶ್ವರ್ಯಾ ಗೌಡ
ಸೈರನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಇದೀಗ ತಮ್ಮ ಎರಡನೇ ಸಿನಿಮಾದ ಎಂಗೇಜ್‌ಮೆಂಟ್‌ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ರಾಜು ಬೋನಗಾನಿ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರತಂಡದ ಪ್ರಕಾರ, ವಿವಿಧ ಸ್ಥಳಗಳಲ್ಲಿ ಎಂಗೇಜ್‌ಮೆಂಟ್ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ಕೊಡಗು ಮತ್ತು ಚಿಕ್ಕಮಂಗಳೂರಿನ ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಮುಂಬೈನ ಗದ್ದಲದ ಬೀದಿಗಳು ಮತ್ತು ಗೋವಾದ ಪ್ರಶಾಂತ ಬೀಚ್‌ಗಳವರೆಗೆ ಭಾರತದ ವೈವಿಧ್ಯಮಯ ತಾಣಗಳನ್ನು ಅನ್ವೇಷಿಸುತ್ತದೆ. ಇದರೊಂದಿಗೆ ಚೆನ್ನೈ ಮತ್ತು ಹೈದರಾಬಾದ್‌ನಂತಹ ಸ್ಥಳಗಳಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಈ ಮೂಲಕ ದೇಶದ ಶ್ರೀಮಂತ ವೈವಿಧ್ಯತೆಯನ್ನು ಸೆರೆಹಿಡಿಯಲಾಗಿದೆ.
ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. ಹೀಗಾಗಿ, ಚಿತ್ರದ ಕೆಲಸ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ವಿಷಯ ಆಧಾರಿತ ಚಿತ್ರಗಳು ಇಂದು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡುತ್ತವೆ: ನಟ ಪ್ರವೀರ್ ಶೆಟ್ಟಿ
ಎಂಗೇಜ್‌ಮೆಂಟ್ ಚಿತ್ರವನ್ನು ಸೂರಂ ಮೂವೀ ಬ್ಯಾನರ್ ಅಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿದ್ದಾರೆ ಮತ್ತು ರಾಜಗೋಪಾಲ್ ಅಯ್ಯರ್, ಬಾಲ ರಾಜವಾಡಿ, ಭಾವನಾ, ರಜನಿಶ್ರೀ ಕಲಾ, ಶರದ್ ವರ್ಮಾ, ದೀಪ್ತಿ ಗುಪ್ತಾ, ಸುಜಯ್ ರಾಮ್ ಡಿಜೆ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.