ಶೆಫ್ ಚಿದಂಬರ
ಶೆಫ್ ಚಿದಂಬರ

'ಶೆಫ್ ಚಿದಂಬರ' ಚಿತ್ರೀಕರಣ 29 ದಿನಗಳಲ್ಲಿ ಮುಕ್ತಾಯ

ಅನಿರುದ್ಧ ಜಟ್ಕರ್ ಅವರ ಮುಂದಿನ ಸಿನಿಮಾ ಶೆಫ್ ಚಿದಂಬರ ಕೇವಲ 29 ದಿನಗಳಲ್ಲೇ ಚಿತ್ರೀಕರಣ ಮುಕ್ತಾಯಗೊಳಿಸಿದೆ. ಆನಂದ್ ರಾಜ್ ಸಿನಿಮಾ ನಿರ್ದೇಶನ ಮಾಡಿದ್ದು, ಅ.10 ರಂದು ಚಿತ್ರೀಕರಣ ಪೂರ್ಣಗೊಂಡಿದೆ.

ಅನಿರುದ್ಧ ಜಟ್ಕರ್ ಅವರ ಮುಂದಿನ ಸಿನಿಮಾ ಶೆಫ್ ಚಿದಂಬರ ಕೇವಲ 29 ದಿನಗಳಲ್ಲೇ ಚಿತ್ರೀಕರಣ ಮುಕ್ತಾಯಗೊಳಿಸಿದೆ. ಆನಂದ್ ರಾಜ್ ಸಿನಿಮಾ ನಿರ್ದೇಶನ ಮಾಡಿದ್ದು, ಅ.10 ರಂದು ಚಿತ್ರೀಕರಣ ಪೂರ್ಣಗೊಂಡಿದೆ.

ಸಿನಿಮಾದ ಕೆಲವು ದೃಶ್ಯಗಳನ್ನು ಹಂಚಿಕೊಂಡಿರುವ ಚಿತ್ರ ತಂಡ, ಇದೊಂದು ಗಾಢ ಹಾಸ್ಯ ಥ್ರಿಲ್ಲರ್ ನ್ನು ಸಂಧಿಸುವ ಕಥಾಹಂದರ ಹೊಂದಿರುವ ಸಿನಿಮಾ ಆಗಿದೆ. ಅನಿರುದ್ಧ್ ಶೆಫ್ ಪಾತ್ರದಲ್ಲಿ ನಟಿಸಿದ್ದು, ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ. ಸಿನಿಮಾವನ್ನು ಬೆಂಗಳೂರು, ಮಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಶೆಫ್ ಚಿದಂಬರ ಸಿನಿಮಾವನ್ನು ದಮ್ತಿ ಪಿಕ್ಚರ್ಸ್ ಪ್ರಸ್ತುತಪಡಿಸಿದ್ದು ರೂಪ ಡಿಎನ್ ನಿರ್ಮಿಸಿದ್ದಾರೆ.

ಸಿನಿಮಾಗೆ ಉದಯ್ ಲೀಲಾ ಅವರ ಛಾಯಾಗ್ರಹಣ ಮತ್ತು ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆ ಇದೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಶಿವಮಣಿ ಶ್ರೀಧರ್, ಮಹಾಂತೇಶ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com