'ದಂತಕಥೆ' ಭಾಗವಾಗಲು ಒಂದೆಡೆ ಭಯ ಮತ್ತೊಂದೆಡೆ ಉತ್ಸುಕತೆ ಇತ್ತು: ನಟ ರಘು ಮುಖರ್ಜಿ

ಕ್ರೈಮ್-ಥ್ರಿಲ್ಲರ್ ಹೆಡ್ ಬುಶ್‌ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದ ನಟ ರಘು ಮುಖರ್ಜಿ ಅವರು, 'ದಂತಕಥೆ' ಸಿನಿಮಾದಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.   
ದಂತಕಥೆ ಚಿತ್ರತಂಡ.
ದಂತಕಥೆ ಚಿತ್ರತಂಡ.

ಕ್ರೈಮ್-ಥ್ರಿಲ್ಲರ್ ಹೆಡ್ ಬುಶ್‌ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದ ನಟ ರಘು ಮುಖರ್ಜಿ ಅವರು, 'ದಂತಕಥೆ' ಸಿನಿಮಾದಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.    

ವಚನ್ ನಿರ್ದೇಶನದ ಈ ಚಿತ್ರದಲ್ಲಿ ರವಿಶಂಕರ್ ಹಿರಿಯ ಅಧಿಕಾರಿಯಾಗಿ ಮತ್ತು ಕಿಶೋರ್ ವಿಶೇಷ ತನಿಖಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ನಿನ್ನೆಯಷ್ಟೇ ಮೋಷನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಡುಗಡೆ ಮಾಡಿದರು.

ಚಿತ್ರದಲ್ಲಿ ಯಶಾ ಶಿವಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

<strong>ರಘು ಮುಖರ್ಜಿ</strong>
ರಘು ಮುಖರ್ಜಿ

ಮೋಷನ್ ಪೋಸ್ಟರ್ ಸಮಾರಂಭದಲ್ಲಿ ಮಾತನಾಡಿದ ರಘು ಮುಖರ್ಜಿ, ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಕಥೆಯೇ ಕುತೂಹಲಕಾರಿಯಾಗಿದೆ. ಈ ಚಿತ್ರದ ಭಾಗವಾಗಲು ಒಂದೆಡೆ ಭಯ, ಮತ್ತೊಂದೆಡೆ ಉತ್ಸುಕತೆ ಇತ್ತು ಎಂದು ಹೇಳಿದರು.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತನಿಖೆಯ ಸುತ್ತ ನಡೆಯುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ, ಕೊರೋನಾ ಮುಂಚೆ ಆರಂಭವಾಗಿದ್ದ ಚಿತ್ರ ಆನಂತರ ಇಡೀ ಚಿತ್ರರಂಗ ಸ್ತಬ್ಧವಾಗಿದ್ದ ಹಿನ್ನೆಲೆಯಲ್ಲಿ ನಮ್ಮ ಚಿತ್ರವೂ ನಿಂತುಹೋಯಿತು. ಕರಾಳ ಅಧ್ಯಾಯ ಮುಗಿದ ನಂತರ ಚಿತ್ರೀಕರಣ ಆರಂಭಿಸಿ ಪೂರ್ಣಗೊಳಿಸಿದ್ದೇವೆ. ತನಿಖಾ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಘಟನೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಚಿತ್ರದ ತಿರುಳು ಎಂದು ನಿರ್ದೇಶಕರು ಚಿತ್ರದ ಕುರಿತು ಮಾಹಿತಿ ನೀಡಿದರು.

ಹಲ್ಮಿಡಿ ಪ್ರೊಡಕ್ಷನ್ಸ್ ಮತ್ತು ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆಗಳ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com