ವಿಜಯ ದೇವರಕೊಂಡ-ಸಮಂತಾ ಅಭಿನಯದ 'ಖುಷಿ' ಸಿನಿಮಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್!

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ತೆರೆಕಂಡಿತು. ದೇವರಕೊಂಡ ಮತ್ತು ಸಮಂತಾ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿಯೂ ಕಮಾಲ್ ಮಾಡಿತು. ಇದೀಗ, ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
ಖುಷಿ ಸಿನಿಮಾ ಪೋಸ್ಟರ್
ಖುಷಿ ಸಿನಿಮಾ ಪೋಸ್ಟರ್

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ತೆರೆಕಂಡಿತು. ದೇವರಕೊಂಡ ಮತ್ತು ಸಮಂತಾ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿಯೂ ಕಮಾಲ್ ಮಾಡಿತು. ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿಯೇ 70 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ, ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಬಿಡುಗಡೆ ನಂತರ, ಖುಷಿ ಸಿನಿಮಾದ ಓಟಕ್ಕೆ ಬ್ರೇಕ್ ಬಿದ್ದಿತು. ಇದೀಗ, ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಶಿವ ನಿರ್ವಾಣ ನಿರ್ದೇಶನದ ಈ ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ವರದಿಯ ಪ್ರಕಾರ, ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಭಾರಿ ಮೊತ್ತವನ್ನೇ ಪಾವತಿಸಿದೆ ಎನ್ನಲಾಗಿದೆ. ಸದ್ಯ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಸೆಪ್ಟೆಂಬರ್ 30 ಅಥವಾ ಅಕ್ಟೋಬರ್ 4 ರಂದು ಪ್ರಾರಂಭವಾಗುವ ಸಾದ್ಯತೆ ಇದೆ.

ಖುಷಿಗೆ ಪ್ರೇಕ್ಷಕರಿಂದ ಅಗಾಧವಾದ ಪ್ರತಿಕ್ರಿಯೆ ಸಿಕ್ಕಿತು. ಕೊನೆಯ ಬಾರಿ ಲೈಗರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ್ ದೇವರಕೊಂಡ ಅವರು ತಮ್ಮ ಚಿತ್ರದ ಮೇಲೆ ಪ್ರೀತಿ ತೋರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಿದರು. 

'ನೀವೆಲ್ಲರೂ ನನ್ನೊಂದಿಗೆ 5 ವರ್ಷಗಳ ಕಾಲ ಕಾದಿದ್ದೀರಿ. ನಾನು ಕೂಡ ತಾಳ್ಮೆಯಿಂದ ಕಾಯ್ದಿದ್ದೇನೆ. ಇದೀಗ ಖುಷಿ ಸಿನಿಮಾ ಮಾಡಿದ್ದೇನೆ. ನನಗೆ ಈ ಸಂತೋಷದಿಂದ ಎಚ್ಚರವಾಯಿತು ಮತ್ತು ನನ್ನ ಫೋನ್‌ಗೆ ನೂರಾರು ಸಂದೇಶಗಳು ಬಂದವು. ನಾನು ಸಹಾಯ ಮಾಡಲು ಸಾಧ್ಯವಿಲ್ಲ ಆದರೆ, ಈ ಭಾವನೆಗಳೊಂದಿಗೆ ಕಣ್ಣೀರು ಹಾಕುತ್ತೇನೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹೋಗಿ ಚಿತ್ರವನ್ನು ಆನಂದಿಸಿ' ಎಂದು ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com