ಮಲಯಾಳಂನ ಖ್ಯಾತ ಚಿತ್ರ ನಿರ್ದೇಶಕ ಕೆ ಜಿ ಜಾರ್ಜ್ ಕೊಚ್ಚಿಯಲ್ಲಿ ನಿಧನ
ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
Published: 24th September 2023 12:55 PM | Last Updated: 25th September 2023 03:14 PM | A+A A-

K G George
ತಿರುವನಂತಪುರ: ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೆ.ಜಿ.ಜಾರ್ಜ್ (ಗೀವರ್ಗೀಸ್ ಜಾರ್ಜ್ ಕುಲಕ್ಕಟಿಲ್) ಅವರು ಮೇ 24, 1946 ರಂದು ತಿರುವಲ್ಲಾದಲ್ಲಿ ಸ್ಯಾಮ್ಯುಯೆಲ್ ಮತ್ತು ಅನ್ನಮ್ಮ ಅವರ ಹಿರಿಯ ಮಗನಾಗಿ ಜನಿಸಿದರು. ಅವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮ ಚಲನಚಿತ್ರ ನಿರ್ದೇಶನ ಕೋರ್ಸ್ ನ್ನು ಪೂರ್ಣಗೊಳಿಸಿದ್ದರು. ಖ್ಯಾತ ನಿರ್ದೇಶಕ ರಾಮು ಕಾರ್ಯತ್ ಅವರ ‘ಮಾಯಾ’ ಚಿತ್ರದಲ್ಲಿ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.
ಜಾರ್ಜ್ ಅವರು, ಸ್ವಪ್ನದನಂ (1975) ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಇದು ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದನ್ನೂ ಓದಿ: ಹೆಣ್ಣಿನ ಮಾದರಿಯ ಟ್ರೋಫಿ ಪುರುಷರನ್ನು ಪ್ರಚೋದಿಸುತ್ತದೆ: ನಟ ಅಲೆನ್ಸಿಯರ್ ಹೇಳಿಕೆ; ತೀವ್ರ ಟೀಕೆಗೆ ಗುರಿ
ಅವರ ಪ್ರಸಿದ್ಧ ಚಲನಚಿತ್ರಗಳೆಂದರೆ ಉಳ್ಕಡಲ್ (1979), ಮೇಳ (1980), ಯವನಿಕಾ (1982), ಲೇಖನುದೇ ಮರಣಂ ಒರು ಫ್ಲ್ಯಾಶ್‌ಬ್ಯಾಕ್ (1983), ಅದಮಿಂತೆ ವಾರಿಯೆಲ್ಲು (1983), ಪಂಚವಡಿ ಪಾಲಂ (1984), ಇರಕಲ್ (1986), ಮತ್ತು ಮತ್ತೋರಲ್ (1988) ), ಅವರ ವಿವಿಧ ಚಿತ್ರಗಳಿಗಾಗಿ ಅವರು 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅವರ ಚಲನಚಿತ್ರಗಳು ವಿಡಂಬನಾತ್ಮಕ ಮತ್ತು ಸ್ತ್ರೀವಾದಿ ವಿಷಯಗಳಿಗಾಗಿ ಪ್ರಶಂಸಿಸಲ್ಪಟ್ಟಿವೆ. ಜಾರ್ಜ್ ಅವರು ಮಲಯಾಳಂ ಸಿನಿ ತಂತ್ರಜ್ಞರ ಸಂಘದ (MACTA) ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ ಮತ್ತು ಅದರ ಕಾರ್ಯಕಾರಿ ಸದಸ್ಯರಾಗಿದ್ದರು. ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು.