ಅವಳ ನಗು ನೋಡಿ ನನ್ನ ಹೃದಯ ಅರಳಿತ್ತು: ಆವತ್ತು ಇಡೀ ದಿನ ಆ ಹುಡುಗಿ ಹಿಂದೆಯೇ ಸುತ್ತಾಡಿದ್ದೆ; ರಕ್ಷಿತ್ ಶೆಟ್ಟಿ
ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಅವಳ ನಗು ನೋಡಿ ನನ್ನ ಹೃದಯ ಅರಳಿತ್ತು, ಆ ದಿನ ಇಡೀ ಟ್ರಿಪ್ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ,
Published: 29th September 2023 09:20 AM | Last Updated: 29th September 2023 09:20 AM | A+A A-

ರಕ್ಷಿತ್ ಶೆಟ್ಟಿ
ಬೆಂಗಳೂರು: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ತೆಲುಗಿಗೂ ಡಬ್ ಆಗಿ ಸಿನಿಮಾ ಸದ್ದು ಮಾಡ್ತಿದೆ. ಪ್ರಿಯಾ- ಮನು ಮುದ್ದಾದ ಪ್ರೇಮಕತೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರಮೋಷನ್ ವೇಳೆ ನಟ ರಕ್ಷಿತ್ ಶೆಟ್ಟಿ ತಮ್ಮ ಫಸ್ಟ್ ಲವ್ ಬಗ್ಗೆ ಮಾತನಾಡಿದ್ದರು. 9ನೇ ಕ್ಲಾಸ್‌ನಲ್ಲಿದ್ದಾಗ ತಮ್ಮದೇ ತರಗತಿ ಹುಡುಗಿಯನ್ನು ನೋಡಿ ಕಳೆದುಹೋಗಿದ್ದ ಘಟನೆ ನೆನಪಿಸಿಕೊಂಡಿದ್ದರು. ಸ್ಕೂಲ್ ಟ್ರಿಪ್‌ಗೆ ಹೋದಾಗ ನಡೆದ ಆ ಘಟನೆಯನ್ನು ರಕ್ಷಿತ್ ಶೆಟ್ಟಿ ವಿವರಿಸಿದ್ದರು.
ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಅವಳ ನಗು ನೋಡಿ ನನ್ನ ಹೃದಯ ಅರಳಿತ್ತು, ಆ ದಿನ ಇಡೀ ಟ್ರಿಪ್ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ, ಎಂದು ರಕ್ಷಿತ್ ಶೆಟ್ಟಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮಾಸ್ಟರ್‌ಪೀಸ್ ಎಂದ ಸಮಂತಾ!
ಅದನ್ನು ಲವ್ ಅನ್ನೋಕ್ಕಾಗಲ್ಲ, ಕ್ರಶ್ ಎನ್ನಬಹುದು. 9ನೇ ತರಗತಿಯಲ್ಲಿದ್ದಾಗ ಒಮ್ಮೆ ಸ್ಕೂಲ್ ಟ್ರಿಪ್‌ಗೆ ಹೋಗ್ತಿದ್ವಿ. ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್. ಬಸ್ ಲಾಸ್ಟ್ ಸೀಟ್ ಅಲ್ಲಿ ಕೂತಿದ್ದೆ. ಎಲ್ಲರಿಗೂ ಕಾಯ್ತಿದ್ವಿ. ಆಕೆ ನನ್ನ ಕ್ಲಾಸ್‌ಮೇಟ್. ಅವಳನ್ನ ನಾನು ಯಾವತ್ತು ನೋಡಿಯೇ ಇರಲಿಲ್ಲ.
ನಾನು ಟ್ರಿಪ್‌ಗೆ ಕ್ಯಾಮರಾ ತಗೊಂಡು ಹೋಗಿದ್ದೆ. ಆಗ ಎಲ್ಲರ ಬಳಿ ಕ್ಯಾಮರಾ ಇರಲಿಲ್ಲ. ನನ್ನ ಕ್ಯಾಮರಾ ತುಂಬಾ ಬರೀ ಅವಳದ್ದೆ ಫೋಟೊಗಳಿದ್ದವು. ಆದರೆ ಅದು ಆಕೆಗೆ ಗೊತ್ತಾಗಲಿಲ್ಲ, ಅದನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಶಾಲಾ ದಿನಗಳ ತಮ್ಮ ಫಸ್ಟ್ ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.