ಷಡ್ಯಂತ್ರ, ರೆಡ್ ಮತ್ತಿತರ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ರಾಜೇಶ್ ಮೂರ್ತಿ ಅವರು 'ಡಿಂಕು' ಎಂಬ ಸಸ್ಪೆನ್ಸ್ ಮತ್ತು ಫ್ಯಾಂಟಸಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇದು ಅವರ ನಿರ್ದೇಶನದ 10ನೇ ಸಿನಿಮಾವಾಗಿದೆ.
ಈ ಚಿತ್ರದಲ್ಲಿ ರಾಜೇಶ್ ಮೂರ್ತಿ ಅವರ ಮಗ ಯಶಸ್ವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಶಸ್ವ ಹಿರಿಯ ಚಿತ್ರ ನಿರ್ಮಾಪಕ ಹಾಗೂ ಛಾಯಾಗ್ರಾಹಕ ಎಚ್ ಎಂಕೆ ಮೂರ್ತಿ ಅವರ ಮೊಮ್ಮಗ ಆಗಿದ್ದಾರೆ.
ಅಗ್ನಿಲೋಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದಿರುವ ಯಶಸ್ವ, ಡಿಂಕು ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇದು ಅವರ ಎರಡನೇ ಸಿನಿಮಾವಾಗಿದೆ.
ಕುತೂಹಲಕಾರಿ ವಿಷಯವೇನೆಂದರೆ, ಈ ಚಿತ್ರದಲ್ಲಿ ಸಾನಿಧಿ ಕಾಣಿಸಿಕೊಂಡಿದ್ದಾರೆ, ಆದರೆ ಮಾತನಾಡುವ ಗೊಂಬೆ 'ಡಿಂಕು' ಕೇಂದ್ರ ಬಿಂದುವಾಗಿದೆ. ಇದು ಸಸ್ಪೆನ್ಸ್ ಮತ್ತು ಹಾಸ್ಯದ ಅಂಶಗಳನ್ನು ಒಳಗೊಂಡಿದ್ದರೂ, ಇದು ಹಾರರ್ ಚಿತ್ರವಲ್ಲ. ಬೆಂಗಳೂರು ಸುತ್ತಮುತ್ತ ಡಿಂಕು ಚಿತ್ರೀಕರಣ ನಡೆದಿದ್ದು, ಸಂಕಲನ ಪೂರ್ಣಗೊಂಡಿದ್ದು, ಡಬ್ಬಿಂಗ್ ಅಂತಿಮ ಹಂತದಲ್ಲಿದೆ.
ಗೊಂಬೆ ಪ್ರದರ್ಶನ ನಡೆಸುವ ಯುವತಿ ಮತ್ತು ಅವಳ ಪ್ರೀತಿಯ ಗೊಂಬೆ 'ಡಿಂಕು' ಸುತ್ತ ಕಥೆ ಸಾಗುತ್ತದೆ. ಈ ಚಿತ್ರವನ್ನು ನೆಲ ಮಹೇಶ್ ಮತ್ತು ನೇವಿ ಮಂಜು ನಿರ್ಮಿಸಿದ್ದಾರೆ. ಇದರಲ್ಲಿಎಪಿ ಗಿರೀಶ್ ನಿರ್ದೇಶನದಲ್ಲಿ ನಾಲ್ಕು ಆಕ್ಷನ್ ಸೀಕ್ವೆನ್ಸ್ ಇದ್ದು, ನಿತೀಶ್ ಕುಮಾರ್ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಡಿಂಕುವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.
Advertisement