ಮೈಸೂರು ಮೂಲದ ನಿರ್ದೇಶಕ ನಾಗಭೂಷಣ ದೇಶಪಾಂಡೆ ತಮ್ಮ ಚೊಚ್ಚಲ ಕಿರುಚಿತ್ರ 'ಬೇರ ಹುಡುಕಿದ ಮರ' ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಇದು ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 19 ನೇ ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (JAFF) ಲೈಟ್ ಆಫ್ ಏಷ್ಯಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರವೊಂದು ಈ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದ್ದು, ಕನ್ನಡ ಚಿತ್ರರಂಗ ಮಹತ್ವದ ಹಿರಿಮೆಗೆ ಪಾತ್ರವಾಗಿದೆ.
ನವೆಂಬರ್ 30 ರಿಂದ ಡಿಸೆಂಬರ್ 7 ರವರೆಗೆ ಈ ಚಲನಚಿತ್ರೋತ್ಸವ ನಡೆಯಲಿದೆ. ಪ್ರತಿಷ್ಠಿತ ಪ್ರೇಗ್ ಚಲನಚಿತ್ರ ಶಾಲೆಯಲ್ಲಿ ಚಲನಚಿತ್ರ ನಿರ್ಮಾಣ ಕುರಿತು ತರಬೇತಿ ಪಡೆದಿರುವ ಇಂಜಿನಿಯರ್ ಆಗಿರುವ ಚಿತ್ರನಿರ್ಮಾಪಕ ದೇಶಪಾಂಡೆ, ಸಾಮಾಜಿಕ ಸಮಸ್ಯೆಯನ್ನು ಎತ್ತಿ ತೋರಿಸುವ ಈ ಪ್ರಾದೇಶಿಕ ಕಥೆಯನ್ನು ಹೊರತಂದಿದ್ದಾರೆ.
ಚಿತ್ರವು ರೋಹಿತ್ ಸುತ್ತ ಆಳವಾದ ಭಾವನಾತ್ಮಕ ಮತ್ತು ಚಿಂತನೆ-ಪ್ರಚೋದಕ ಕಥೆಯನ್ನು ಹೇಳುತ್ತದೆ. 13 ವರ್ಷದ ರೋಹಿತ್, ತನ್ನ ಮುರಿದ ಕುಟುಂಬದ ಸವಾಲುಗಳನ್ನು ಪರಿಶೋಧಿಸುತ್ತಾನೆ. ಕಥೆಯು ಆಳವಾಗಿ ಕಾಡುತ್ತದೆ. ವಿಷಕಾರಿ ಪುರುಷತ್ವ, ಮಹಿಳೆಯರಿಗೆ ಕಡಿಮೆ ಸ್ಥಾನಮಾನ ಕುರಿತು ವಿವರಿಸುತ್ತದೆ. ಮತ್ತು ಲಿಂಗ ಪಾತ್ರಗಳ ಬಗ್ಗೆ ಮಗುವಿನ ತಿಳುವಳಿಕೆಯನ್ನು ಜಾಗೃತಗೊಳಿಸುತ್ತದೆ.
ಈ ಕಥೆಯು ವೈಯಕ್ತಿಕವಾಗಿದೆ. ಮೈಸೂರಿನಲ್ಲಿ ಬೆಳೆದ ನಾನು, ಚಿಕ್ಕ ಹುಡುಗರು ತಮ್ಮ ತಾಯಂದಿರ ಭಾವನಾತ್ಮಕ ಹೋರಾಟಗಳನ್ನು ಅರ್ಥಮಾಡಿಕೊಳ್ಳದೆ ತಮ್ಮ ತಂದೆಯ ಪರವಾಗಿ ನಿಲ್ಲುವ ಅನೇಕ ಕುಟುಂಬಗಳಿಗೆ ಸಾಕ್ಷಿಯಾಗಿದ್ದೇನೆ. ಈ ಚಿತ್ರವು ಆ ಪಿತೃಪ್ರಭುತ್ವದ ಆದರ್ಶಗಳನ್ನು ಪ್ರಶ್ನಿಸುವ ಗುರಿ ಹೊಂದಿದೆ ಮತ್ತು ಸಮಾಜದಲ್ಲಿ ಮೌನವಾಗಿರುವವರಿಗೆ ಧ್ವನಿಯನ್ನು ನೀಡುತ್ತದೆ ಎಂದು ದೇಶಪಾಂಡೆ ಹಂಚಿಕೊಂಡಿದ್ದಾರೆ.
'ಬೇರ ಹುಡುಕಿದ ಮರ' ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ 2024 ರಲ್ಲಿ ಪ್ರಥಮ ಪ್ರದರ್ಶನವಾದಾಗಿನಿಂದ ಹಚ್ಚೆಚ್ಚು ಸದ್ದು ಮಾಡುತ್ತಿದೆ. ಇದು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದಿದೆ. ನಂತರ ದೆಹಲಿಯ ಯೆಲ್ಲೊಸ್ಟೋನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. JAFF ಗಾಗಿ ಚಿತ್ರದ ಆಯ್ಕೆಯು ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಎಂಟ್ರಿಯನ್ನು ಸೂಚಿಸುತ್ತದೆ. ಜಾಗತಿಕ ಪ್ರೇಕ್ಷಕರಿಗೆ ಕನ್ನಡ ಕಥೆ ಹೇಳುವಿಕೆಯ ಪ್ರದರ್ಶನವಿರಲಿದೆ.
ಮೈಸೂರಿನಿಂದ ಅಂತಾರಾಷ್ಟ್ರೀಯ ಗಮನಸೆಳೆದ ದೇಶಪಾಂಡೆಯವರ ಪ್ರಯಾಣ ಪ್ರಾದೇಶಿಕ ಕಥೆಗಳ ಶಕ್ತಿಗೆ ಸಾಕ್ಷಿಯಾಗಿದೆ. ಇದು ಮೈಸೂರಿಗೆ ಹೆಮ್ಮೆಯ ಕ್ಷಣವನ್ನು ಮತ್ತು ಜಾಗತಿಕ ವೇದಿಕೆಯಲ್ಲಿ ಕನ್ನಡ ಕಿರುಚಿತ್ರಗಳಿಗೆ ಹೊಸ ಮಾನದಂಡವಾಗಿದೆ.
Advertisement