ಇಂದು ನೀವು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ: ವಿಜಯ್ ಗೆಲುವಿಗೆ ಶಿವಣ್ಣ ಹರ್ಷ

ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ. ಈ ನಡುವೆ ಶಿವಣ್ಣ ಕೂಡ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.
Vijay And Shivarajkumar
ವಿಜಯ್ ಮತ್ತು ಶಿವರಾಜ್ ಕುಮಾರ್
Updated on

ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 108 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಸರ್ಕಾರ ರಚನೆಗೆ ಮುಂದಾಗಿದೆ.

ನಟ, ರಾಜಕಾರಣಿಯಾದ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯ್‌ ಅವರ ಈ ಅಭೂತಪೂರ್ವ ಗೆಲುವಿಗೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಇದು ಅರ್ಹವಾದ ಗೆಲುವು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ. ಈ ನಡುವೆ ಶಿವಣ್ಣ ಕೂಡ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.

ಇತರರು ನಮ್ಮ ಮೇಲೆ ತೀವ್ರವಾದ ದಾಳಿ ಮಾಡುವಾಗ ಮೌನವಾಗಿರಬೇಕು. ನಮ್ಮ ಕೆಲಸ ಅವರಿಗೆ ಉತ್ತರ ನೀಡುವುದು ಅತ್ಯಂತ ದೊಡ್ಡ ಗೆಲುವು. ಪತ್ರಿಕಾ ಸಂವಾದವೊಂದರಲ್ಲಿ ನಾನು ಟಿವಿಕೆ ಮೂಲಕ ವಿಜಯ್ ರಾಜನಾಗಲು ಹೊರಟಿದ್ದಾರೆ ಎಂದು ತಮಾಷೆಗೆ ಹೇಳಿದ್ದೆ. ಆದರೆ ಇಂದು ನೀವು (ವಿಜಯ್) ರಾಜನಂತೆ ಎತ್ತರವಾಗಿ ನಿಂತಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ತಮಿಳುನಾಡು ಜನತೆಗೆ ಅನೇಕ ಆಶ್ವಾಸನೆಗಳನ್ನು ವಿಜಯ್ ನೀಡಿದ್ದಾರೆ. ಇವುಗಳನ್ನು ಈಡೇರಿಸುವಂತೆ ಆಗಲಿ ಎಂಬುದು ಶಿವಣ್ಣನ ಹಾರೈಕೆ. ‘ತಮಿಳುನಾಡಿನ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ನಿಮಗೆ ಸಿಗಲಿ ಮತ್ತು ರಾಜ್ಯವು ಅಭಿವೃದ್ಧಿಯತ್ತ ಸಾಗಲಿ’ ಎಂದು ಶಿವಣ್ಣ ಆಶಿಸಿದ್ದಾರೆ.

Vijay And Shivarajkumar
ಆಡಳಿತ ವಿರೋಧಿ ಅಲೆ ವಿಜಯ್ ಗೆಲುವಿಗೆ ಕಾರಣ: ನಟಿ-ರಾಜಕಾರಣಿ ಸುಮಲತಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com