ರಿಯಲ್ ಲೈಫ್‌ನಲ್ಲಿ ವಿಲನ್ ಆದ ಹುಚ್ಚ ವೆಂಕಟ್ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ!

Published: 06 Sep 2018 08:04 PM IST
ಹುಚ್ಚಾ ವೆಂಕಟ್
ಬೆಂಗಳೂರು: ಬಿಗ್ ಬಾಸ್ ಹಾಗೂ ರಿಯಾಲಿಟಿ ಶೋಗಳಲ್ಲಿ ಹುಚ್ಚಾಟ ನಡೆಸುವ ಮೂಲಕ ಸುದ್ದಿಯಾಗಿದ್ದ ನಟ ಹುಚ್ಚ ವೆಂಕಟ್ ಇದೀಗ ರಿಯಲ್ ಲೈಫ್ ನಲ್ಲೂ ಹುಚ್ಚಾಟ ಮೆರೆದಿದ್ದಾರೆ. 

ಕುಡಿದು ರಸ್ತೆ ಮಧ್ಯೆ ತೂರಾಟ ನಡೆಸಿ ಸುದ್ದಿಯಾಗಿದ್ದ ಹುಚ್ಚ ವೆಂಕಟ್ ಇದೀಗ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರು ಹಾಗೂ ಅಂಗಡಿಯವನ ಮೇಲೆ ಹಲ್ಲೆ ಮಾಡಿದ್ದಾರೆ. 

ಉಲ್ಲಾಳದ ಬೇಕರಿ ಬಳಿ ಬಂದು ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದಾನೆ. 

ಹಲ್ಲೆ ವಿಷಯ ತಿಳಿದ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವೆಂಕಟ್ ನನ್ನು ವಶಕ್ಕೆ ಪಡೆದುಕೊಂಡು ಬಳಿಕ ಜ್ಞಾನ ಭಾರತಿ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ವೆಂಕಟ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ