ಯೋಗರಾಜ ಭಟ್ಟರ 'ಪಂಚತಂತ್ರ'ದಲ್ಲಿ ಅಕ್ಷರಾ ಗೌಡ!

Published: 11 Sep 2018 10:52 AM IST | Updated: 11 Sep 2018 11:40 AM IST
ಅಕ್ಷರಾ ಗೌಡ
ಬೆಂಗಳೂರು: ತಮಿಳು ನಟಿ ಅಕ್ಷರಾ ಗೌಡ ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಕನ್ನಡ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದ ಅಕ್ಷರಾ ಗೆ ಈಗ ಕಾಲ ಕೂಡಿ ಬಂದಿದೆ. ಈ ಮೊದಲು ಅಕ್ಷರಾ ಪ್ರೇಮದಲ್ಲಿ ಸಿನಿಮಾದಲ್ಲಿ ನಟಿಸಿದ್ದರು, ಆದರೆ ಅದರ ಶೂಟಿಂಗ್ ಅರ್ಧದಲ್ಲೇ ನಿಂತು ಹೋಯಿತು.

ರಂಗಾರೇಜ್ ನಟಿ ತಮಿಳಿನಲ್ಲಿ ಪ್ರಸಿದ್ದ ನಟಿಯಾಗಿದ್ದಾರೆ, ಪಂಚತಂತ್ರ ಸಿನಿಮಾಗಾಗಿ ತಮಿಳು ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ,ಪಂಚತಂತ್ರದಲ್ಲಿ  ವಿಹಾನ್ ಮತ್ತು ಸೋನಾಲ್ ಮಾಂಟೆರಿಯೋ ಜೊತೆ ಬೆಳ್ಳಿ ಪರದೆ ಹಂಚಿಕೊಂಡಿದ್ದಾರೆ. 

ಯೋಗರಾಜ್ ಭಟ್ ಅವರಂತ ನಿರ್ದೇಶಕರ ಜೊತೆ ಕೆಲಸ ಮಾಡಲು ನನಗೆ ಬಹಳ ಖುಷಿಯಾಗುತ್ತಿದೆ, ಇದಕ್ಕಿಂತ  ಒಳ್ಳೆಯ ಸಿನಿಮಾ ನನಗೆ ಸಿಗುವುದಿಲ್ಲ ಎಂದು ಅಕ್ಷರಾ ಹೇಳಿದ್ದಾರೆ. ಇದರಲ್ಲಿ ಐದು ಮಂದಿ ನಾಯಕರಿದ್ದು ಟಾಮ್ ಬಾಯ್ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ಹಿರಿಯ ನಿರ್ದೇಶಕರಾಗಿರುವ ಭಟ್ಟರು ಸಲಹೆಗಳನ್ನು ಮುಕ್ತವಾಗಿ ನೀಡುತ್ತಾರೆ, ಅವರು ಯಾರಿಗೂ ಆದೇಶ ನೀಡುವುದಿಲ್ಲ, ಅವರ ನಡವಳಿಕೆಯಿಂದ ನಾನು ಪ್ರೇರಿತಗೊಂಡಿದ್ದಾನೆ, ಭಟ್ಟರು ನನ್ನನ್ನು ಗೌಡ್ರು ಎಂದು ಕರೆಯುತ್ತಿದ್ದರು ಎಂದು ಅಕ್ಷರಾ ತಿಳಿಸಿದ್ದಾರೆ.

ಸದ್ಯ ಮುಂಬಯಿ ಮತ್ತು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ, ಬಾಲಿವುಡ್ ಸಿನಿಮಾದಲ್ಲೂ  ನಟಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.  
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ