ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ಅನೀಶ್ ತೇಜೇಶ್ವರ್ ರೆಡಿ

Published: 06 Sep 2018 11:22 AM IST | Updated: 06 Sep 2018 11:52 AM IST
ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ತಯಾರಾದ ಅನೀಶ್ ತೇಜೇಶ್ವರ್
ಬೆಂಗಳೂರು: "ವಾಸು ನಾನ್ ಪಕ್ಕಾ ಕಮರ್ಷಿಯಲ್" ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಇನ್ನೂ ಶೀರ್ಷಿಕೆ ಸಿಕ್ಕಿಲ್ಲ ಆದರೆ ಚಿತ್ರಕ್ಕೆ ಕಥೆ ಬರೆದಿರುವ ಲೇಖಕ ಪ್ರಶಾಂತ್ ರಾಜಪ್ಪ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದು ಪ್ರಶಾಂತ್ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.

ವಿನ್ವಿಸ್ಟಿಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ಮೂಡಿಬರುವ ಚಿತ್ರದ ಶೀರ್ಷಿಕೆಯನ್ನು ಇದೇ ಸೆ. 13ರಂದು ಅನೀಶ್ ಘೋಷಣೆ ಮಾಡಲಿದ್ದಾರೆ.
Posted by: RHN | Source: The New Indian Express

ಈ ವಿಭಾಗದ ಇತರ ಸುದ್ದಿ