ಹೋಟೆಲ್‍ ರೂಮ್ ನಲ್ಲಿ ಬೆಂಗಾಲಿ ನಟಿ ಪಾಯೆಲ್ ಅನುಮಾನಸ್ಪದ ಸಾವು

Published: 06 Sep 2018 07:42 PM IST
ಪಾಯೆಲ್ ಚಕ್ರವರ್ತಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಹೋಟೆಲ್ ನಲ್ಲಿ ಬೆಂಗಾಲಿ ನಟಿ ಪಾಯೆಲ್ ಚಕ್ರವರ್ತಿ ಅವರು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಹಲವು ಧಾರವಾಹಿಯಲ್ಲಿ ನಟಿಸಿದ್ದ ಪಾಯೆಲ್ ದಕ್ಷಿಣ ಕೋಲ್ಕತ್ತಾ ನಿವಾಸಿಯಾಗಿದ್ದು,  ಬುಧವಾರ ಬೆಳಗ್ಗೆ ಸಿಲಿಗುರಿ ಚರ್ಚ್ ರೋಡಿನ ಹೋಟೆಲ್ ವೊಂದರ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಆತ್ಮಹತ್ಯೆ ರೀತಿ ಕಾಣಿಸುತ್ತಿದೆ. ಆದರೂ ಇತರೆ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಸಿಲಿಗುರಿ ಉಪ ಪೊಲೀಸ್ ಆಯುಕ್ತ ಗೌರಬ್ ಲಾಲ್ ಅವರು ಹೇಳಿದ್ದಾರೆ.

ಇತ್ತೀಚೆಗೆ ಪಾಯೆಲ್ ತನ್ನ ಪತಿಯಿಂದ ವಿಚ್ಛೇದನ ಪಡೆದು ಮಗನ ಜೊತೆ ವಾಸವಿದ್ದರು. ಸದ್ಯ ಪಾಯೆಲ್ ಮೃತಪಟ್ಟಿರುವ ವಿಷಯವನ್ನು ಕೋಲ್ಕತ್ತಾದಲ್ಲಿರುವ ಅವರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಅವರು ಲಾಲ್ ಹೇಳಿದ್ದಾರೆ.

ಪಾಯೆಲ್ ಬಂಗಾಳಿಯ ‘ಕೇಲೋ’, ‘ಕಾಕ್‍ಪಿಟ್’ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದರು.
Posted by: LSB | Source: PTI

ಈ ವಿಭಾಗದ ಇತರ ಸುದ್ದಿ