ಎಲ್ಲಾ ಅಡೆತಡೆಗಳ ನಡುವೆಯೂ 'ದಿ ವಿಲನ್'ಗೆ ಸೆನ್ಸಾರ್ ಬೋರ್ಡ್ ಅಸ್ತು!

Published: 06 Sep 2018 10:02 AM IST | Updated: 06 Sep 2018 11:49 AM IST
ವಿಲನ್ ಸ್ಚಿಲ್
ಬೆಂಗಳೂರು: ಅಂತೂ ಇಂತೂ ನಿರ್ದೇಶಕ ಪ್ರೇಮ್ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ,  ದಿ  ವಿಲನ್ ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದೆ. 

ಮೊದಲಿಗೆ ಪ್ರಾದೇಶಿಕ  ಸೆನ್ಸಾರ್ ಬೋರ್ಡ್ ಎ ಪ್ರಮಾಣ ಪತ್ರ ನೀಡಿತ್ತು, ಮತ್ತೆ ಪರಿಶೀಲನೆ ನಡೆಸುವಂತೆ  ನಿರ್ದೇಶಕ ಪ್ರೇಮ್ ಮಂಡಳಿಗೆ ಮನವಿ ಮಾಡಿದ್ದರು. ಅಂತಿಮವಾಗಿ ಸಮಸ್ಯೆ ಬಗೆಹರಿದಿದ್ದು, ಸೆನ್ಸಾರ್ ಬೋರ್ಡ್ ಗೆ ಧನ್ಯವಾದ ತಿಳಿಸಿದ್ದಾರೆ.

ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ಪಡೆದಿರುವ ಪ್ರೇಮ್ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ,  ಗಣೇಶ ಚತುರ್ಥಿಯಂದು ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವುದಾಗಿ ಪ್ರೇಮ್ ಹೇಳಿದ್ದಾರೆ.  ಅದೇ ದಿನ ಅಡ್ವಾನ್ಸ್ ಬುಕ್ಕಿಂಗ್ ಗೆ ದಿನಾಂಕ ಕೂಡ ತಿಳಿಸುವುದಾಗಿ ಹೇಳಿದ್ದಾರೆ, 

ಸದ್ಯ ಪ್ರೇಮ್ ಚೆನ್ನೈನಲ್ಲಿದ್ದು, ಕೊನೆಯ ಕ್ಷಣದ ಕೆಲಸಗಳನ್ನು ಮಾಡುತ್ತಿದ್ದಾರೆ, ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಗಳು ಅಂತಿಮಗೊಳ್ಳುತ್ತಿವೆ, ಇನ್ನು ಸ್ವಲ್ಪ ಕೆಲಸಗಳು ಬಾಕಿ ಉಳಿದಿದ್ದು ರಿಲೀಸ್ ಗೆ ಸಿದ್ದತೆ ನಡೆದಿದೆ, ಗಣೇಶ ಹಬ್ಬದ ದಿನ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ.
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ