ಗಂಧದಗುಡಿ ಸಿನಿಮಾ ರಿ-ರಿಲೀಸ್: ವೀಕ್ಷಿಸದಿರಲು ಡಾ.ವಿಷ್ಣು ಅಭಿಮಾನಿಗಳು ನಿರ್ಧರಿಸಿರುವುದು ಏಕೆ?

Published: 12 Sep 2018 10:40 AM IST | Updated: 12 Sep 2018 11:46 AM IST
ಗಂಧದ ಗುಡಿ ಪೋಸ್ಟರ್
ಬೆಂಗಳೂರು: ಡಾ.ರಾಜ್ ಕುಮಾರ್ ಮತ್ತು ಡಾ, ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಈ ವಾರ ಮತ್ತೆ ಥಿಯೇಟರ್ ಗಳಲ್ಲಿ ರಿ ರಿಲೀಸ್ ಆಗುತ್ತಿದೆ, ಆದರೆ  ಡಾ. ವಿಷ್ಣು ವರ್ಧನ್ ಅಭಿಮಾನಿಗಳು ಗಂಧದಗುಡಿ ಸಿನಿಮಾ ನೋಡದಿರಲು ನಿರ್ಧರಿಸಿದ್ದಾರೆ.

ಸಿನಿಮಾ ಬಿಡುಗಡೆಗೆ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಮೆಚ್ಚಿನ ಸ್ಟಾರ್ ನನ್ನು  ವಿಲ್ಲನ್ ರೋಲ್ ನಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, 1973 ರಲ್ಲಿ ಗಂಧದ ಗುಡಿ ಸಿನಿಮಾ  ರಿಲೀಸ್ ಆಗಿತ್ತು, ಆದರೆ ಆ ವೇಳೆ ವಿಷ್ಣುವರ್ಧನ್ ಅವರಿಗೆ ಇಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಇರಲಿಲ್ಲ. 

ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಡುವೆ ಫೈಟಿಂಗ್ ದೃಶ್ಯಗಳಿವೆ, ನಾವು ಅಭಿಮಾನಿಗಳಾಗಿ ಅದನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಎರಡನೇಯದಾಗಿ ಡಾ.ರಾಜ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಘರ್ಷಣೆಗೆ ಕಾರಣವಾಗಬಹುದು, ಅದನ್ನು  ತಪ್ಪಿಸಲು ನಾವು ಬಯಸುತ್ತೇವೆ,  ಹೀಗಾಗಿ ನಾವು ಸಿನಿಮಾ ನೋಡದಿರಲು ನಿರ್ಧರಿಸಿದ್ದೇವೆ ಎಂದು ವಿಷ್ಣು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. 

ಧೀರಜ್ ಪಿಕ್ಚರ್ಸ್ ಸಿನಿಮಾ ಹಂಚಿಕೆ ಮಾಡಿದ್ದು, ಗತಕಾಲದ ಸಿನಿಮಾವನ್ನು ಸುಮಾರು 200 ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ. ಬ್ಲ್ಯಾಕ್ ಬಸ್ಟರ್ ಸಿನಿಮಾವಾಗಿದ್ದು ಬಹಳ ದೀರ್ಘಕಾಲದಿಂದ ಯೋಜಿಸಲಾಗಿತ್ತು, ಹೀಗಾಗಿ ಗಣೇಶ ಹಬ್ಬದಂದು ರಿಲೀಸ್ ಗೆ  ನಿರ್ಧರಿಸಲಾಗಿದೆ. ಜೊತೆಗೆ ಆನ್ ಲೈನ್ ನಲ್ಲೂ ಸಿನಿಮಾ ದೊರೆಯುತ್ತದೆ, ಆದರೆ ಥಿಯೇಟರ್  ನಲ್ಲಿ ನೋಡುವುದಕ್ಕೆ ತುಂಬಾ ವ್ಯತ್ಯಾಸವಿದೆ, ಸಿನಿಮಾಗೆ ಡಿಟಿಎಸ್ ವ್ಯವಸ್ಥೆ ನೀಡಲಾಗಿದೆ. ಇಬ್ಬರು ಸ್ಟಾರ್ ನಟರಿಗೆ ಅರ್ಪಿಸಲಾಗುತ್ತಿದೆ ಎಂದು ಹಂಚಿಕೆದಾರರು ತಿಳಿಸಿದ್ದಾರೆ,ಎಂ,ಪಿ ಶಂಕರ್  ನಿರ್ಮಾಣ ಮಾಡಿದ್ದು, ಕಲ್ಪನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ