Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Voting ends peacefully for first phase of Lok Sabha polls in Karnataka

ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ, 241 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ

Casual Photo

ವ್ಯಾಪಾರ ಮಾರ್ಗಗಳು ದುರ್ಬಳಕೆ: ಎಲ್ ಒಸಿ ಆಚೆಗಿನ ಎಲ್ಲಾ ವ್ಯಾಪಾರ ಭಾರತದಿಂದ ಅಮಾನತು

Casual Photo

ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಹಿಂದೆ ಬಿದ್ದ ಭಾರತ

Siddaramaiah

ಮೋದಿ ಹೆಲಿಕಾಪ್ಟರ್ ಪರಿಶೀಲನೆ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅಮಾನತು ಖಂಡನಾರ್ಹ- ಸಿದ್ದರಾಮಯ್ಯ

Casual Photo

ಕುಣಿಗಲ್ : ಮತದಾನಕ್ಕೆ ಬಂದ ಮಹಿಳೆ ಅಪಹರಣ, ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

LS poll 2019: EC says 66% interim voter turnout in 2nd phase

ಲೋಕಸಭೆ ಚುನಾವಣೆ: 2ನೇ ಹಂತ ಬಹುತೇಕ ಶಾಂತಿಯುತ, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನ

Dharmendra Pradhan

ನಿಮಗೆ ಎಷ್ಟು ಧೈರ್ಯ? ಸೂಟ್‌ಕೇಸ್ ಮುಟ್ಟಿದ ಅಧಿಕಾರಿ ಮೇಲೆ ಕೇಂದ್ರ ಸಚಿವ ಧರ್ಮೇಂದ್ರ ಗರಂ, ವಿಡಿಯೋ ವೈರಲ್!

MP Congress

ಮಧ್ಯ ಪ್ರದೇಶ ಕಾಂಗ್ರೆಸ್‌ನ 'ಚೌಕೀದಾರ್ ಚೋರ್‌ ಹೈ' ಜಾಹೀರಾತು ನಿಷೇಧ

ಸಂಗ್ರಹ ಚಿತ್ರ

ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ 'ಕಿಸ್' ಮಾಡುವಾಗ ನದಿಗೆ ಬಿದ್ದ ಜೋಡಿ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ತಾಯಿ ಕರಳು ಚಿರಋಣಿ: 21 ದಿನದ ನವಜಾತ ಶಿಶುವಿನ ಜೀವ ಉಳಿಸಿದ ಪೊಲೀಸರು, ವಿಡಿಯೋ ವೈರಲ್!

VIP;s voted in various constituencies

ಮತಯಂತ್ರದಲ್ಲಿ ನನ್ನ ಕ್ರಮಸಂಖ್ಯೆ ಪತ್ತೆಹಚ್ಚಲು 5 ನಿಮಿಷ ತೆಗೆದುಕೊಂಡೆ: ಸುಮಲತಾ ಅಂಬರೀಷ್

Suspected hacker messages from Dubai Prince

ದುಬೈ ಪ್ರಿನ್ಸ್ ಹೆಸರಿನಲ್ಲಿ ಚೆನ್ನೈ ಮಹಿಳೆಗೆ 5 ಲಕ್ಷ ರು.ವಂಚಿಸಿದ ಹ್ಯಾಕರ್

Kerala BJP chief PS Sreedharan Pillai booked for derogatory remark on Muslims

ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕೇರಳ ಬಿಜೆಪಿ ಅಧ್ಯಕ್ಷ ಪಿಳ್ಳೈ ವಿರುದ್ಧ ಕೇಸ್ ದಾಖಲು

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಅಧಿಕಾರ, ದುರಾಸೆ ಹಾಗೂ ಮಹತ್ವಾಕಾಂಕ್ಷೆಯೇ ಕೆಜಿಎಫ್: ಕಥೆ ಹುಟ್ಟಿದ ಕಥೆಯನ್ನು 'ಪ್ರಶಾಂತ್ ನೀಲ್' ವಿವರಿಸಿದ್ದು ಹೀಗೆ!

‘I wondered if I could pull off a project as big as KGF’

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ಬೆಂಗಳೂರು: ಎಲ್ಲರೂ ತಮ್ಮ ಬಗ್ಗೆ ಮಾತನಾಡುವಂತೆ ಮಾಡಿದ ಪ್ರಶಾಂತ್ ಈಗ ಕೆಜಿಎಫ್ ಮೂಲಕ ಮನೆ ಮಾತಾಗಿದ್ದಾರೆ. ಮುಂಬಯಿನಿಂದ ಕೋಲಾರ ಗೋಲ್ಡ್ ಫ್ಯಾಕ್ಟರಿಗೆ ಬಂದ ರಾಕಿ ಕಥೆ ತೋರಿಸುತ್ತಿದ್ದಾರೆ ಪ್ರಶಾಂತ್ ನೀಲ್.

ಮೊದಲು ಬರಹಗಾರ ನಂತರ ನಿರ್ದೇಶಕ
ಕೆಜಿಎಫ್ ಕಥೆ ಬರೆಯುವಾಗ ಅವರು ಕೇವಲ ಬರಹಗಾರನಾಗಿ ಕಥೆ ನೋಡಿದರೇ ಹೊರತು ನಿರ್ದೇಶಕನಾಗಿ ಅಲ್ಲ,  ನೀವು ಒಬ್ಬ ನಿರ್ದೇಶಕನಾಗಿ ಕಥೆ ನೋಡಿದಾಗ ಅದರ ವಾಸ್ತವ ಹಾಗೂ ಚಿತ್ರಕ್ಕೆ ಬೇಕಾದ ಹಣದ ಬಗ್ಗೆ ಯೋಚನೆ ಮಾಡುತ್ತೀರಿ,  ಆಗ ಕನಸು ದೊಡ್ಡ ಕನಸು ಕಾಣುವುದನ್ನು ನಿಲ್ಲಿಸುತ್ತೀರಿ. ನಾನು ಕೂಡ ಕೆಜಿಎಫ್ ಕಥೆಯನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದರೇ ಏನಾಗುತ್ತಿತ್ತು ಎಂದು ಪ್ರಶ್ನೆ ಮಾಡಿಕೊಳ್ಳುತ್ತೇನೆ. ನಾನು ಕಥೆ ಬರೆಯಲು ಆರಂಭಿಸಿದಾಗ ನನ್ನ 10 ವರ್ಷದ ಕೆರಿಯರ್ ನಲ್ಲಿ ಇದು ವಿಶೇಷವಾದದ್ದು ಎನಿಸುತ್ತಿತ್ತು ಎಂದು ಹೇಳಿದ್ದಾರೆ,

ಆರಂಭಿಕ ಆತಂಕಗಳು

ನಿರ್ಮಾಪಕ ವಿಜಯ್ ಕಿರಂಗದೂರು ಅವರನ್ನು ಭೇಟಿ ಮಾಡಿ ಕಥೆಯ ಬಗ್ಗೆ ಚರ್ಚಿಸಿದೆ, ಮೊದಲು ನಾನು ವಿಜಯ್ ಅವರಿಗೆ ಕೌಟುಂಬಿಕ ಕಥೆ ಹೇಳಿದೆ, ಅದು ಬೇರೊಬ್ಬ ನಟನಿಗಾಗಿ ಬರೆದ ಕಥೆಯಾಗಿತ್ತು. ನಿಮ್ಮ ಬಳಿ ಬೇರೆ ಯಾವುದಾದರೂ ಕಥೆ ಇದೆಯೇ ಎಂದು ಕೇಳಿದಾಗ ನಾನು ಹೇಳಲು ತಯಾರಾದೆ ಅದರೆ ಈ ಚಿತ್ರಕ್ಕೆ ಬಹಳ ಪ್ರಮಾಣದ ಹಣ ಬೇಕು ಎಂಬುದನ್ನು ತಿಳಿಸಿದೆ.

ಆ ಕ್ಷಣದಲ್ಲಿ ಅವರು ಒಂದು ಸನ್ನಿವೇಶ ಕೇಳಿದರು. ಆಮೇಲೆ ಕಥೆ ಹೇಳುವಂತೆ ತಿಳಿಸಿದರು ಎಂದು ವಿವರಿಸಿದ ಪ್ರಶಾಂತ್ ಕೆಜಿಎಫ್ ಗೆ ಯಶ್  ಹೇಗೆ ಬಂದರು ಎಂಬುದನ್ನು ತಿಳಿಸಿದ್ದಾರೆ. ನನಗೆ ಯಶ್ ಬಗ್ಗೆ ಸ್ವಲ್ಪ ಗೊತ್ತಿತ್ತು. ಉಗ್ರಂ ಸಿನಿಮಾದ ಸೆಲೆಬ್ರಿಟಿ ಶೋ ಗೆ ಯಶ್ ಆಗಮಿಸಿದ್ದರು.ಜೊತೆಗೆ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.  ಅವರ ಗೂಗ್ಲಿ ಸಿನಿಮಾವನ್ನು ನಾನು ನೋಡಿದ್ದೆ, ಅವರಲ್ಲಿ ಒಂದು ಸ್ವಾಭಾವಿಕ ನಟನಾ ಪ್ರತಿಭೆ ಇರುವುದು ನನಗೆ ತಿಳಿದಿತ್ತು. ಕಥೆಗೆ ಯಾರು ಸೂಕ್ತ ಎಂದು ನಿರ್ಮಾಪಕರು ಕೇಳಿದಾಗ ನಾನು ಯಶಳೇ ಎಂದು ಹೇಳಿದೆ, ಸಿನಿಮಾ ತಯಾರಿಸು ಯೋಚನೆ ನನ್ನ ತಲೆಯಲ್ಲಿ ಇಲ್ಲದ ಸಮಯದಲ್ಲೇ ಇದೆಲ್ಲಾ ನಡೆದು ಹೋಯಿತು, ಆದರೆ, ನಿರ್ಮಾಪಕರು ಇದನ್ನು ಗಂಭೀರವಾಗಿ ಪರಿಗಣಿಸಿ ಯಶ್ ಅವರಿಗೆ ಕರೆ ಮಾಡಿದರು. ಆ ವೇಳೆ ಅವರು ತಮ್ಮ ಡೇಟ್ಸ್ ನೀಡಿದರು ಎಂದು ವಿವರಿಸಿದ್ದಾರೆ.

70 ರದಶಕದ ಸಿನಿಮಾ ಗಳಿಂದ ಪ್ರೇರಿತರಾಗಿದ್ದ ಪ್ರಶಾಂತ್ ನೀಲ್ ಅಮಿತಾಬ್ ಬಚ್ಚನ್ ಚಿತ್ರಗಳನ್ನು ನೋಡುತ್ತಾ ಬೆಳೆದವರು, ಅವರ ಆ್ಯಕ್ಷನ್ ಪಿಲ್ಮ್ ಗಳು ಪ್ರಶಾಂತ್ ಅವರಿಗೆ ಭಾರೀ ಮೆಚ್ಚುಗೆಯಾಗಿದ್ದವು. ದಿ ಗುಡ್ ಬ್ಯಾಡ್ ಅಂಡ್ ಅಗ್ಲಿ ಸಿನಿಮಾ ಭಾರೀ ಮೊತ್ತದ್ಲಿ ತಯಾರಾದ ಸಿನಿಮಾವಾಗಿತ್ತು. ಇದೇ ವೇಳೆ 70 ದಶಕದಲ್ಲಿ ಚಿನ್ನದ ಬೆಲೆ ಕೂಡ ಭಾರಿ ಇತ್ತು ಎಂಬುದನ್ನು ನಾನು ಒದಿದ್ದೆ,  ಅಂದಿನ ದಾಖಲೆ ಇದುವರೆಗೆ ಮುರಿಯಲು ಸಾಧ್ಯವಾಗಿಲ್ಲ, ಹೀಗಾಗಿ ನಾನು ಕೆಜಿಎಫ್ ಸಿನಿಮಾಗಾಗಿ ಮತ್ತಷ್ಚು ತಯಾರಿ ಆರಂಭಿಸಿದೆ.

ಕಥೆಯನ್ನು ಎರಡು ಭಾಗವಾಗಿ ಮಾಡಲಾಗಿತ್ತು.ಕಥೆಯಲ್ಲಿ ಸಾಕಷ್ಟು ಚಿನ್ನ ಮತ್ತು ದುರಾಸೆ ಇದೆ. ತಾವು ಬರಹಗಾರರಿಂದ ನಿರ್ದೇಶನಕ್ಕೆ ಬಂದ ಮೇಲೆ ಕಥೆಯಲ್ಲಿ ಭಾರೀ ಮಟ್ಟದಲ್ಲಿ ಬದಲಾವಾಣೆ ಆಗಲಿಲ್ಲ, ಹಣದ ದೃಷ್ಟಿಯಿಂದ ನಾನು ಕೆಲವು ಬದಲಾವಣೆ ಮಾಡಿದೆ.ಜೊತೆಗೆ ಸಿನಿಮಾಗೆ ಸ್ವಲ್ವ ಕಮರ್ಷಿಯಲ್ ಬದಲಾವಣೆ ಕೂಡ ತಂದಿದ್ದೇವೆ, ಕೆಜಿಎಫ್ ಮೊದಲ ಭಾಗ ಪರಿಸ್ಥಿತಿ ಬಗ್ಗೆ ವಿವರಿಸುತ್ತದೆ, ಕೆಜಿಎಫ್ 2ನೇ ಭಾಗದ ಚಿತ್ರೀಕರಣಕ್ಕೆ ಮೊದಲ ಭಾಗದ 4 ಪಟ್ಟು ಹೆಚ್ಚು ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಧಿಕಾರ, ದುರಾಸೆ ಹಾಗೂ ಮಹತ್ವಾಕಾಂಕ್ಷೆಯ ಕಥೆಯೇ ಕೆಜಿಎಫ್

ಕೆಜಿಎಫ್ ಒಂದು ಪವರ್ ಫುಲ್ ಕಥೆ,ರಾಕಿ ಮಾಡುವ ಪ್ರತಿ ಕೆಲಸ, ಆತ ಸಾಗುವ ದಾರಿ, ಎಲ್ಲವೂ  ರಾಕಿಯ ಮೇಲಿನ ಕಥೆ, ಪ್ರಭಾವಶಾಲಿಯಾದವರು ಇತಿಹಾಸ ಹೊಂದಿರುತ್ತಾರೆ, ಯಾರೂ 40 ದಿನಗಳಲ್ಲಿ ಎದ್ದು ಪವರ್ ಫುಲ್ ಆಗಲು ಸಾಧ್ಯವಿಲ್ಲ, ಅದು ಬಾಲ್ಯದಿಂದಲೇ ಬರಬೇಕು, ಒಬ್ಬನ ದುರಾಸೆ, ಮಹಾತ್ವಾಕಾಂಕ್ಷೆ ಸಾರ್ವರ್ತಿಕ ಕಥೆ ಇದಾಗಿದೆ.

ಉಗ್ರಂ ಸಿನಿಮಾ ಮಾಡಿದಾಗ ಯಾವುದೇ ರೀತಿಯ ನಿರೀಕ್ಷೆಗಳಿರಲಿಲ್ಲ, ಅಲ್ಲಿಯವರೆಗೂ ನಾನು ಯಾರಿಗೂ ಗೊತ್ತಿರಲಿಲ್ಲ, ಆದರ ಪ್ರಯಾಣ ನನಗೆ ಬಹಳ ಮುಖ್ಯವಾದದ್ದು ಆದರೆ ಅಂದಿಗೂ ಇಂದಿಗೂ ಬಹಳ ವ್ಯತ್ಯಾಸಗಳಿವೆ, ನಿರ್ಮಾಪಕರು ಹಾಗೂ ಸೂಕ್ತ ತಂಡ ಸಿಕ್ಕ  ಮೇಲೆ ಕೆಜಿಎಫ್ ನಲ್ಲಿ ನಾನು ಯಾವ ತಪ್ಪು ಮಾಡಲು ಸಾಧ್ಯವಿಲ್ಲ.

ಕೆಜಿಎಫ್ ನಲ್ಲಿ ಸುಮಾರು 500-600 ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ., ಒಬ್ಬ ನಿರ್ದೇಶಕನಾಗಿ ಸೆಟ್ ನಲ್ಲಿ ನಟನನ್ನು ಉತ್ತೇಜಿಸಬೇಕು. ಅವರನ್ನು ಹುಚ್ಚರನ್ನಾಗಿ ಸಲು ನಾನು ಕಿರುಚಬಾರದು.ನಟನ ಮೂಡ್ ಸಿನಿಮಾಗೆ ಬಹಳ ಮುಖ್ಯ. ಎಲ್ಲರೂ ಸೆಟ್ ನಲ್ಲಿ ಸಂತೋಷವಾಗಿರಬೇಕು ಎಂಬುದು ನನ್ನ ಆಸೆ ಎಂದು ಹೇಳಿದ್ದಾರೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : KGF, Prashanth neel, director, Yash, ಕೆಜಿಎಫ್, ನಿರ್ದೇಶಕ, ಪ್ರಶಾಂತ್ ನೀಲ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS